Posts Slider

Karnataka Voice

Latest Kannada News

ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ “ವಿಷಪ್ರಾಶನ” ಮಾಡಲಾಗಿದೆ- ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ…

Spread the love

ಹುಬ್ಬಳ್ಳಿ: ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳಿಗೆ ವಿಷ ಪ್ರಾಶನ ಪ್ರಯತ್ನ ನಡೆದಿದೆ..ಶ್ರೀಗಳ ಆಹಾರವನ್ನು ವಿಷ ಮಾಡಿ ಅವರನ್ನು ಮುಗಿಸಬೇಕು ಅಂತ ಯೋಚನೆ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪ ಮಾಡಿರುವ ಬೆಲ್ಲದ ಅವರು, ಶ್ರೀಗಳ ಆರೋಗ್ಯ ಹದಗೆಟ್ಟಿದೆ ಅವರಿಗೆ ಫುಡ್ ಪಾಯಿಸನ್ ಆಗಿದೆ ಅಂತ ಗೊತ್ತಿತ್ತು. ಇದಕ್ಕೆ ಕಾರಣ ಬೇರೆಯಿದೆ. ಮಠದ ಹೊರಗಡೆ ಇಬ್ಬರು ಮುಸ್ಲಿಂ ಸಮಾಜದ ಹುಡುಗರು ಇದ್ದಾರೆ. ಆ ಇಬ್ಬರು ಮಠಕ್ಕೆ ಯಾರು ಬರ್ತಾರೆ ಯಾರು ಹೋಗತ್ತಾರೆ ಅಂತ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ವಿಡಿಯೋ ಸಹ ಮಾಡಿಕೊಳ್ಳುತ್ತಿದ್ದಾರೆ ಅಂತ ಭಕ್ತರು ನನಗೆ ಹೇಳಿದ್ದಾರೆ‌ ಎಂದರು.

Exclusive videos…

ಅದೇ ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೆ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಶ್ರೀಗಳು ಈ ಬಗ್ಗೆ ನನಗೆ ಹೇಳಿಕೊಂಡಿದ್ದಾರೆ. ನನಗೆ ಮನಸ್ಸು ಸರಿಯಾಗುತ್ತಿಲ್ಲ, ನನಗೆ ವಿಷ ಪ್ರಾಶನ ಆಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಊಟದಲ್ಲಿ ಏನೋ ಹೆಚ್ಚು ಕಡಿಮೆ ಹಾಕಲಾಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕೆಟ್ಟ ಕೆಲಸ ಮಾಡುತ್ತಿದ್ದಾರೆ ಸಮಾಜ ನೋಡುತ್ತಿದೆ ಅವರ ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಸಮಾಜ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.


Spread the love

Leave a Reply

Your email address will not be published. Required fields are marked *