ಹುಬ್ಬಳ್ಳಿ ಗಲಾಟೆ “ಗುರುಶಿದ್ಧಪ್ಪ ಬೇಪಾರಿ”ಯ ಮಕ್ಕಳಾದ ‘ಹಮೀದ್-ಸಮೀರ್’ ಹೆಡಮುರಿಗೆ ಕಟ್ಟಿದ ಪೊಲೀಸರು….

ಹುಬ್ಬಳ್ಳಿ: ಗಂಗಾಧರನಗರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ತಲಮರೆಸಿಕೊಂಡಿದ್ದವರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾಧವ ಹಾಗೂ ದಾವೂದ್ ಗ್ಯಾಂಗಿನ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ 22 ಆರೋಪಿಗಳನ್ನ ಬಂಧಿಸಲಾಗಿತ್ತು.
ಪ್ರಮುಖವಾಗಿ ತಲ್ವಾರ ಹಿಡಿದು ಮೇಲೆರಗಲು ಪ್ರಯತ್ನಿಸಿದ್ದ ಸಮೀರ್ ಎಂಬಾತ ತಪ್ಪಿಸಿಕೊಂಡಿದ್ದ. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ಇಂದು ಇವರುಗಳನ್ನ ಬಂಧಿಸಿ, ಅವರ ಬಳಿಯಿದ್ದ ಮೂರು ತಲ್ವಾರ್ ವಶಕ್ಕೆ ಪಡೆದುಕೊಂಡಿದ್ದಾರೆ.