“ಮುಚ್ಕೊಂಡಿರಬೇಕು” ಧಾರವಾಡದಲ್ಲಿ ‘ರೌಡಿಷೀಟರ್ಸ್, ಉಡಾಳ’ರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ACP….

ಧಾರವಾಡ: ಮುಚ್ಕೊಂಡು ಜೀವನ ನಡೆಸಿ ಒಳ್ಳೆಯದನ್ನ ಮಾಡಿ, ಇಲ್ಲದಿದ್ದರೇ ನಾವೂ ಚೆನ್ನಾಗಿ ಪಾಠ ಕಲಿಸುತ್ತೇವೆ ಎಂದು ಧಾರವಾಡ ಎಸಿಪಿ ಪ್ರಶಾಂತ ಸಿದ್ಧನಗೌಡರ ಅವರು, ರೌಡಿಷೀಟರ್‌ಗಳು ಹಾಗೂ ಉಡಾಳರಿಗೆ ಖಡಕ್ ವಾರ್ನಿಂಗ್ ನೀಡಿದರು.
ಧಾರವಾಡದ ವಿದ್ಯಾಗಿರಿ, ಉಪನಗರ ಹಾಗೂ ಶಹರ ಪೊಲೀಸ್ ಠಾಣೆಯ 175 ರೌಡಿಷೀಟರ್‌ಗಳ ಹಾಗೂ ರಾತ್ರಿಯಾದರೇ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ಪೊಲೀಸರು ಮನೆಗೆ ತೆರಳಿ ಶಾಕ್ ನೀಡಿದ್ದರು.
ವೀಡಿಯೋ…
ಶಹರ ಠಾಣೆಯ ನಾಗೇಶ ಕಾಡದೇವರಮಠ, ಉಪನಗರ ಠಾಣೆಯ ದಯಾನಂದ ಶೇಗುಣಸಿ, ವಿದ್ಯಾಗಿರಿ ಠಾಣೆಯ ಸಂಗಮೇಶ ದಿಡಿಗನಾಳ ಸೇರಿದಂತೆ ಮೂರು ಠಾಣೆಯ ಪಿಎಸ್ಐಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.