ತಮ್ಮನ ಸಾಲಕ್ಕೆ ಅಣ್ಣನಿಗೆ ಚಾಕು ಇರಿತ- ಕಮೀಷನರ್ ಶಶಿಕುಮಾರ್ ಬಿಚ್ಚಿಟ್ಟ ಸತ್ಯ…!!!

ಧಾರವಾಡ: ನಗರದ ಹಾವೇರಿಪೇಟೆಯ ಕಂಠಿಗಲ್ಲಿಯಲ್ಲಿ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಾಯಗೊಂಡ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಕಿಮ್ಸಗೆ ತೆರಳಿ ಗಾಯಾಳು ಭೇಟಿ ಮಾಡಿ ಧಾರವಾಡಕ್ಕೆ ಬಂದಿದ್ದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಪೂರ್ಣ ಮಾಹಿತಿಯನ್ನ ನೀಡಿದ್ರು.
ಗೌಂಡಿ ಕೆಲಸ ಮಾಡುತ್ತಿದ್ದ ಮಲೀಕ್ ಎಂಬಾತ ಗೋವಾದಲ್ಲಿ ಲ್ಯಾಬ್ ಟೆಕ್ಷಿಷಿಯನ್ ಆಗಿದ್ದ ರಾಘವೇಂದ್ರ ಗಾಯಕವಾಡನ ಸಹೋದರನಿಗೆ ಹಣ ನೀಡಿದ್ದ. ಅದನ್ನ ಕೇಳಲು ಬಂದಾಗ ಘಟನೆ ನಡೆದಿದೆ ಎಂದು ವಿವರಿಸಿದರು.