“ಡೀಲ್ ಸದ್ದು” ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕರ ಬದಲಾವಣೆ- ಕೊಟ್ಟಂವ ಕೋಡಂಗಿ ಇಸ್ಕೊಂಡವ ಈರಭದ್ರ…!!!!?

ಹುಬ್ಬಳ್ಳಿ: ಕಿಮ್ಸ್‌ನ ನಿರ್ದೇಶಕ ಹುದ್ದೆಗೆ ಕೋಟಿ ಕೋಟಿ ಡೀಲ್ ನಡೆದಿದೆ ಎಂಬ ಸುದ್ದಿ ಹಬ್ಬಿದ ಒಂದೇ ತಿಂಗಳಲ್ಲಿ ಉತ್ತರ ಕರ್ನಾಟಕದ ಸಂಜೀವಿನಿಯಾಗಿರುವ ಕಿಮ್ಸ್ ಸಿಆರ್ ನಿರ್ದೇಶಕರನ್ನ ಬದಲಾವಣೆ ಮಾಡಿ ರಾಜ್ಯದ ಕಾಂಗ್ರೆಸ್ ಆಡಳಿತ ಆದೇಶ ಹೊರಡಿಸಿದೆ.
ಕೋಟಿ ಕೊಟ್ಟು ಬಂದಿರುವ ಆರೋಪ ಬಂದಿದ್ದ ನಿರ್ದೇಶಕರನ್ನ ಬದಲಾವಣೆ ಮಾಡಿ ಡಾ.ಈಶ್ವರ ಹೊಸಮನಿ ಅವರನ್ನ ಆ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ನವಲಗುಂದ ಕ್ಷೇತ್ರದ ಶಾಸಕರಿಗೆ ಹಣ ಕೊಟ್ಟಿರುವ ಬಗ್ಗೆ ಕೆಪಿಸಿಸಿ ಕಾರ್ಯದರ್ಶಿಯೊಬ್ಬರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.