ಬೆಳೆ ವಿಮೆ ಪರಿಹಾರ: 50-50 ವಂಚಕರಿಗೆ ಹಣ ನೀಡಿದ್ರೇ “ಸಚಿವ ಪ್ರಲ್ಹಾದ ಜೋಶಿ” ಏನ್ಮಾಡ್ತಾರೆ ಗೊತ್ತಾ…!?

ಹುಬ್ಬಳ್ಳಿ: ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಬೆಳೆ ವಿಮೆ ಪರಿಹಾರದ ಫಿಪ್ಟಿ-ಫಿಪ್ಟಿ ವಂಚನೆಯ ಕರಾಳ ರೂಪದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತನಾಡಿ, ವಂಚಕರಿಗೆ ಹಣ ಕೊಟ್ಟರೇ ನಾನು ಮುಂದಿನ ದಿನಗಳಲ್ಲಿ ಸಹಾಯ ಮಾಡಲು ಆಗುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
ನವಲಗುಂದ ಮತ ಕ್ಷೇತ್ರವೂ ಸೇರಿದಂತೆ ಹಲವು ಭಾಗಗಳಲ್ಲಿ ವಂಚಕರ ಕುರಿತು ಸಾಕಷ್ಟು ಮಾಹಿತಿಯನ್ನ ‘ಕೆವಿ’ ಹೊರ ಹಾಕಿತ್ತು. ಈಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಆಸಕ್ತಿ ವಹಿಸಿ ಶಿರಗುಪ್ಪಿ ಹೋಬಳಿ ಮತ್ತು ಕುಂದಗೋಳ ಭಾಗದ ರೈತರ ಬೆಳೆ ವಿಮೆ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಮಯದಲ್ಲಿ ಸ್ವತಃ ಸಚಿವರು, ರೈತರಿಗೆ ಹೇಳಿರುವ ಮಾತುಗಳು ಇಲ್ಲಿದೆ ನೋಡಿ…
ಮಂಟೂರಿನ ರೈತರ ಹೆಸರಿನಲ್ಲಿ ಹಸಿರು ಟವೆಲ್ ಹಾಕಿಕೊಂಡಿರುವ ಗಿರಾಕಿ, ಬಂಡಿವಾಡದ ನಿವಾಸಿಯಾಗಿರುವ ಮೆಂಬರ ಡಾಕ್ಟರ್, ಗದಗದ ಅಕ್ಕಿ ಕಳ್ಳ ಮಾಡಿರುವ ಅನಾಚಾರದ ಬಗ್ಗೆ ಹಲವು ಮಾಹಿತಿಯನ್ನ ಹೊರ ಹಾಕಲಾಗಿತ್ತು.
ಈಗ ಹಣ ಬಿಡುಗಡೆಯಾಗಲಿದೆ. ಈ ಸಮಯದಲ್ಲಿ ಫಿಪ್ಟಿ- ಫಿಪ್ಟಿ ಕೇಳಲು ಬಂದರೆ ಪೊಲೀಸರಿಗೆ ದೂರು ನೀಡಲು ಹೇಳಿದ್ದಾರೆ. ನಿಜವಾದ ರೈತರು ಹೀಗೆ ಮಾಡ್ತಾರೆ.