ಭದ್ರಾಪುರ-ಮಣಕವಾಡ ರಸ್ತೆಯಲ್ಲಿ ವೃದ್ಧನ ಹತ್ಯೆ… ಅಣ್ಣಿಗೇರಿ ಠಾಣೆ ಪೊಲೀಸರು ಸ್ಥಳಕ್ಕೆ…

ಹುಬ್ಬಳ್ಳಿ: ವೃದ್ಧನೋರ್ವನನ್ನ ಬರ್ಭರವಾಗಿ ಹತ್ಯೆ ಮಾಡಿ ಬೀಸಾಕಿ ಹೋಗಿರುವ ಘಟನೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ- ಮಣಕವಾಡ ರಸ್ತೆಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಅಂದಾಜು 60 ಕ್ಕೂ ಹೆಚ್ವಿನ ವಯಸ್ಸಿನ ವೃದ್ಧನನ್ನ ಹತ್ಯೆ ಮಾಡಿರುವ ಸ್ಥಳದಲ್ಲಿ ಸಂಪೂರ್ಣವಾಗಿ ರಕ್ತಸ್ರಾವವಾಗಿದ್ದು, ತೀವ್ರ ಹೊಡೆತದಿಂದ ಕೊಲೆ ಆಗಿರಬಹುದೆಂದು ಶಂಕಿಸಲಾಗಿದೆ.
ಪ್ರಕರಣದ ಮಾಹಿತಿಯನ್ನು ಅಣ್ಣಿಗೇರಿ ಠಸಣೆಯ ಪೊಲೀಸರು ಸ್ಥಳದಲ್ಲಿ ಸಂಗ್ರಹಿಸುತ್ತಿದ್ದು, ಹತ್ಯೆಯಾಗಿರುವ ವೃದ್ಧ ಯಾರೂ ಎಂಬುದನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.