ಧಾರವಾಡ: “ಆಗಿರೋ ಅಪಘಾತ” ನೋಡಲು ಹೋಗಿ “ತಾನೊಂದು ಅಪಘಾತ” ಮಾಡಿದ BRTSನ ಚಿಗರಿ ಬಸ್….

ಧಾರವಾಡ: ನಗರ ಸಾರಿಗೆ ಬಸ್ಸೊಂದು ಬಿಆರ್‌ಟಿಎಸ್‌ನ ಗ್ರೀಲ್‌ಗೆ ಡಿಕ್ಕಿ ಹೊಡೆದ ಘಟನೆಯನ್ನ ನೋಡುತ್ತಿದ್ದ ಚಿಗರಿ ಬಸ್ಸಿನ ಚಾಲಕ ಎದುರಿಗಿದ್ದ ಮತ್ತೊಂದು ಚಿಗರಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಧಾರವಾಡದ ಟೋಲನಾಕಾ ಬಳಿ ಸಂಭವಿಸಿದೆ.
ಘಟನೆಯ ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ..
ಎರಡು ಅಪಘಾತದಲ್ಲಿ ಆರಕ್ಕೂ ಹೆಚ್ಚು ಪ್ರಯಾಣಿಕರಿಗೆ ಅಲ್ಪ ಗಾಯಗಳಾಗಿದ್ದು, ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.