ಧಾರವಾಡದ “ಐತಿಹಾಸಿಕ ಸ್ಥಳ” ಸುಡಗಾಡಿಗೆ ಶಿಫ್ಟ್…!!! ಷಡ್ಯಂತ್ರದ ನೆರಳಲ್ಲಿ 152+….

ಕಳೆದ ಎರಡು ದಿನಗಳ ಹಿಂದೆ ಕರ್ನಾಟಕವಾಯ್ಸ್.ಕಾಂ ಈ ಕೆಳಗಿನ ಮಾಹಿತಿಯನ್ನ ಹೊರ ಹಾಕಿತ್ತು…
ಧಾರವಾಡದ “ಐತಿಹಾಸಿಕ ಹಿನ್ನೆಲೆ” ಮರೆಮಾಚಲು ಬಹುದೊಡ್ಡ ‘ಹುನ್ನಾರ’… Big Exclusive
ಇದರ ಮುಂದುವರೆದ ಭಾಗ ಇಲ್ಲಿದೆ ನೋಡಿ...
ಧಾರವಾಡ: ನಗರದ ಈ ಜಾಗವನ್ನ ಹೇಗಾದರೂ ಮಾಡಿ ತಮಗೆ ಪಡೆದುಕೊಳ್ಳುವ ಹುನ್ನಾರ ಎರಡು ದಶಕಗಳಿಂದಲೂ ನಡೆಯುತ್ತಿದೆ. ಅದಕ್ಕಾಗಿಯೇ ಸೊಗಸಾಗಿದ್ದ ಜಾಗವನ್ನ ಹಿಂದಿನಿಂದ ಭೂತ ಬಂಗಲೆ ಮಾಡಲಾಗುತ್ತಿದೆ.
ಆತಂಕಪಡುವ ವಿಷಯವೆಂದರೇ, ಇಲ್ಲಿ ಕಾಣುತ್ತಿರುವ ಗೋಡೆಯ ಹಿಂಭಾಗದಲ್ಲಿ 152+ ಜೀವಗಳು ದಿನನಿತ್ಯ ಬದುಕಿಗಾಗಿ ಹೋರಾಟ ಮಾಡುತ್ತಿವೆ. ಇಲ್ಲಿದ್ದವರನ್ನ ಹೇಗಾದರೂ ಮಾಡಿ ಭಯದಿಂದ ಹೋಗುವಂತೆ ಮಾಡುವ ಉದ್ದೇಸದಿಂದಲೇ ‘ಐತಿಹಾಸಿಕ’ ಕಟ್ಟಡವನ್ನ ಭೂತ ಬಂಗಲೆಯನ್ನಾಗಿ ಮಾರ್ಪಡಿಸಲಾಗತ್ತೆ.
ತಮ್ಮ ಬಯಕೆಯನ್ನ ಈಡೇರಿಸಿಕೊಳ್ಳಲು ಐತಿಹಾಸಿಕ ಕಟ್ಟಡವನ್ನ ಭೂತ ಬಂಗಲೆಯನ್ನಾಗಿ ಮಾಡಿ, ಇಲ್ಲಿರುವವರನ್ನ ಸುಡಗಾಡಗಟ್ಟಿ (ಸ್ಮಶಾನ)ದ ಸ್ಥಳದಲ್ಲಿ ಸ್ಥಳಾಂತರ ಮಾಡುವ ಬಹುದೊಡ್ಡ ನಾಟಕ ವಿದ್ಯಾಕಾಶಿಯಲ್ಲಿ ಆರಂಭಗೊಂಡಿದೆ.
ದೊಡ್ಡ ದೊಡ್ಡದು ಮಾತಾಡುವವರು ಈ ಬಗ್ಗೆ ಇನ್ನೇಷ್ಟು ದಿನ ಸುಮ್ಮನೆ ಕೂಡುತ್ತಾರೋ ಕಾದು ನೋಡೋಣ. ಪ್ರಜ್ಞಾವಂತರು ಸುಮ್ಮನೆ ಕೂಡಲಿಕ್ಕಿಲ್ಲ ಎಂಬುದು ಕೂಡಾ ಇತಿಹಾಸವಿದೆ.