ಧಾರವಾಡ: ಛತ್ರಿ ಹಿಡಿದು ಸ್ಕೂಟಿ ಚಲಾಯಿಸುತ್ತಿದ್ದ ವಿದ್ಯಾರ್ಥಿ ಲಾರಿಗೆ ಡಿಕ್ಕಿ, ದುರ್ಮರಣ…

ಧಾರವಾಡ: ಬೇಲೂರಿಗೆ ಬರುತ್ತಿದ್ದ ವೇಳೆಯಲ್ಲಿ ಸ್ಕೂಟಿಯೊಂದು ನಿಂತ ಲಾರಿಗೆ ಡಿಕ್ಕಿ ಹೊಡೆದ ಘಟನೆ ನರೇಂದ್ರ ಬೈಪಾಸ್ ಬಳಿ ಸಂಭವಿಸಿದ್ದು, ವಿದ್ಯಾರ್ಥಿಯೋರ್ವ ಸಾವಿಗೀಡಾಗಿದ್ದಾನೆ.
ವೀಡಿಯೋ….
ಸ್ಕೂಟಿಯಲ್ಲಿ ಛತ್ರಿ ಹಿಡಿದುಕೊಂಡು ಬರುತ್ತಿದ್ದ ಸಮಯದಲ್ಲಿ ದುರ್ಘಟನೆ ನಡೆದಿದೆ. ಮದಿಹಾಳದ ಪಿಜಿಯಲ್ಲಿ ಇರುತ್ತಿದ್ದ ವಿಶ್ವಾಸ ಎಂಬಾತ ಸಾವಿಗೀಡಾಗಿದ್ದು, ಮತ್ತೋರ್ವ ಗಾಯಾಳುವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.