‘ಒಂದ್ ಹಿಡಿ’ ಮಣ್ಣನ್ನು ಮುಟ್ಟದ ಅಂಜುಮನ್ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕೇಸ್- “ಜನಸೇವಕನ ಷಢ್ಯಂತ್ರ”…

ಧಾರವಾಡ: ಒಂದೇ ಒಂದು ಹಿಡಿ ಮೊರ್ರಂ ಮುಟ್ಟದ ಅಂಜುಮನ್ ಸಂಸ್ಥೆಯ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ದೂರು ಸಲ್ಲಿಸಿದ ಪರಿಣಾಮ, ನವಲಗುಂದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಎಲ್ಲ ಪದಾಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಹೌದು… ಇಂತಹದೊಂದು ಸೋಜಿಗದ ಸಂಗತಿಯೊಂದು ಬೆಳಕಿಗೆ ಬಂದಿದೆ. ನವಲಗುಂದ ಐತಿಹಾಸಿಕ ಗುಡ್ಡದ ಮಣ್ಷನ್ನ ಕದ್ದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸಮಯದಲ್ಲಿ ಯಾರ ಜೆಸಿಬಿಗಳು, ವಾಹನಗಳಿದ್ದವು ಎಂಬುದು ಜಗ್‌ಜಾಹೀರಾಗಿತ್ತು.
ಇದೀಗ ಸೋಜಿಗ ಪಡುವಂತೆ ಮೈನ್ಸ್ ಇಲಾಖೆ ನವಲಗುಂದ ಪುರಸಭೆ ಮತ್ತು ನವಲಗುಂದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನ ಆರೋಪಿ ಮಾಡಿ, ಪ್ರಕರಣ ದಾಖಲು ಮಾಡಿದ್ದಾರೆ.
ನವಲಗುಂದ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ನೋಟೀಸ್ ನೀಡುವಂತೆ ಆದೇಶ ನೀಡಿದೆ.
ಮುಸ್ಲಿಂ ಸಮಾಜದವರನ್ನ ಸಂತುಷ್ಠಿಗೊಳಿಸಲು ಜನಸೇವಕ ಗುಡ್ಡದ ಮಣ್ಣನ್ನ ತೆಗೆದಿದ್ದು, ಆ ಮಣ್ಣನ್ನ ಕದ್ದು ಸಾಗಾಟ ಮಾಡಿದ್ದು, ಯಾವ ಯಾವ ಗುತ್ತಿಗೆದಾರನ ಹೆಸರಿನಲ್ಲಿ ಹಣ ಹೊಡೆದಿದ್ದು ಹಸಿ ಹದಿಯಾಗಿರುವಾಗಲೇ, ಅಂಜುಮನ್ ಸಂಸ್ಥೆಯನ್ನೆ ಆರೋಪಿ ಮಾಡಿಸಿದ್ದು ಯಾರೂ ಎಂಬುದನ್ನ ಅರಿಯದಷ್ಟು “ಮಬ್ಬರು” ಅಂಜುಮನ್ ಸಂಸ್ಥೆಯವರಲ್ಲ ಎಂದು ಹೇಳಲಾಗುತ್ತಿದೆ.
ಮುಸ್ಲಿಂ ಸಮಾಜದಲ್ಲಿ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತನ ವಿರುದ್ಧ, ಸಮಾಜವನ್ನ ಎತ್ತಿ ಕಟ್ಟುವ ಮತ್ತೂ ಇಡೀ ಸಮಾಜದ ಮುಕುಟ ಮಣಿಯಂತಿರುವ ಅಂಜುಮನ್ ಸಂಸ್ಥೆಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದು ನವಲಗುಂದ ಇತಿಹಾಸದಲ್ಲಿ ಪ್ರಥಮವಾಗಿದೆ.