ಮಾರಡಗಿಯ ಕೃಷಿ ಹೊಂಡದಲ್ಲಿ ಈಜಲು ಹೋಗಿ ’24ರ ಯುವಕ’ ದುರ್ಮರಣ- ಕೆಲವೇ ದಿನದಲ್ಲಿ ನೌಕರಿ ಸೇರಬೇಕಿದ ಕಲ್ಮೇಶ…!!!

ಧಾರವಾಡ: ಬಿಸಿಲಿನ ತಾಪದಿಂದ ತಪ್ಪಿಸುಕೊಳ್ಳಲು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಯುವಕನೋರ್ವ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಯುವಕನನ್ಬ 24 ವಯಸ್ಸಿನ ಕಲ್ಮೇಶ ಗರಗದ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಖಾಸಗಿ ಕಂಪನಿಯಲ್ಲಿ ನೌಕರಿ ಪಡೆದು, ಕೆಲವೇ ದಿನಗಳಲ್ಲಿ ಚೆನೈಗೆ ಕಲ್ಮೇಶ ಹೋಗುವವನಿದ್ದನೆಂದು ಹೇಳಲಾಗಿದೆ.
ಮುದ್ದಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದ್ದು, ಇದರಲ್ಲಿ ದುರ್ಘಟನೆ ನಡೆದಿದೆ. ಮೃತ ಯುವಕನ ಶವಕ್ಕಾಗಿ ಅಗ್ನಿಶಾಮಕ ದಳ ಸುಮಾರು ಹೊತ್ತಿನವರೆಗೆ ಹುಡುಕಾಟ ನಡೆಸಿತ್ತು.
ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.