ಧಾರವಾಡ “ಮಾಡರ್ನ ಹಾಲ್” ಬಳಿ “OT” ಕಾರುಗಳ ಅಪಘಾತ- ಓರ್ವನ ಸಾವು, ಇಬ್ಬರಿಗೆ ಗಾಯ…

ಧಾರವಾಡ: ಬಿಆರ್‌ಟಿಎಸ್ ಮಾರ್ಗದಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸಾವಿಗೀಡಾಗಿ, ಇಬ್ಬರು ಗಾಯಗೊಂಡ ಘಟನೆ ಧಾರವಾಡದ ಮಾಡರ್ನ ಹಾಲ್ ಬಳಿ ಸಂಭವಿಸಿದೆ.
ಕೆಲಗೇರಿಯ ಶಿವಪ್ಪ ಮಾಳಗಿ ಎಂಬಾತ ಸಾವಿಗೀಡಾಗಿದ್ದು, ಇನ್ನಿಬ್ಬರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ಜಖಂಗೊಂಡಿವೆ.
ವೀಡಿಯೋ….
ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬಿಆರ್‌ಟಿಎಸ್ ಮಾರ್ಗದಲ್ಲಿ ಎರಡು ಕಾರುಗಳು ಹೇಗೆ ಬಂದವು ಎಂಬುದನ್ನ ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗಿದೆ.
ಮೃತಪಟ್ಟ ವ್ಯಕ್ತಿಯ ಬಳಿ ಮದ್ಯದ ಪಾಕೇಟ್ ದೊರಕಿದ್ದು, ಕುಡಿತದ ಮತ್ತಿನಲ್ಲಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.