SSLC ಫಲಿತಾಂಶ: ಧಾರವಾಡ ನಂಬರಲ್ಲಿ ಮೇಲಿರಿತು, ಪರ್ಸೆಂಟೇಜ್‌ಲ್ಲಿ ಕೆಳಗಿಳಿಯಿತು….!!!

ಧಾರವಾಡ: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅತೀವ ಕಾಳಜಿ ವಹಿಸಿದ್ದ ಮಿಷನ್ ವಿದ್ಯಾಕಾಶಿಯ ಫಲಿತಾಂಶ, ಖುಷಿಯನ್ನ ಪಡದ ರೀತಿಯಲ್ಲಿ ಬಂದಿದ್ದು, ಈಗಲಾದರೂ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ಸ್ಥಿತಿಯನ್ನ ಅವಲೋಕಿಸುವ ಸ್ಥಿತಿಗೆ ಮುಂದಾಗಬೇಕಿದೆ.
ಹೌದು… ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. ಧಾರವಾಡ ಜಿಲ್ಲೆಯ ಫಲಿತಾಂಶ ಶೇಕಡಾ 67.62 ಆಗಿದ್ದು, ಕಳೆದ ಬಾರಿ 22ನೇ ಸ್ಥಾನದಿಂದ 18ನೇ ಸ್ಥಾನಕ್ಕೇರಿದೆ. ಆದರೆ, ಕಳೆದ ಬಾರಿ 22ನೇ ಸ್ಥಾನದಲ್ಲಿದ್ದರೂ ಫಲಿತಾಂಶ ಶೇಕಡಾ 72.67 ಆಗಿತ್ತು. ಹಾಗಾಗಿ, ಇಂದಿನ ಫಲಿತಾಂಶ ಅಷ್ಟೇನು ಖುಷಿ ಪಡಲು ಆಗುವುದಿಲ್ಲ ಎಂಬುದು ಪ್ರಜ್ಞಾವಂತರ ಮಾತಾಗಿದೆ.
ಆಕಸ್ಮಿಕವಾಗಿ ಕಳೆದ ಬಾರಿ ಪಡೆದ ಶೇಕಡಾ 72.67ನ್ನೇ ಈ ಸಲವೂ ಪಡೆದಿದ್ದರೇ, ರಾಜ್ಯದ ಜಿಲ್ಲಾ ರ‌್ಯಾಂಕಿನಲ್ಲಿ ಧಾರವಾಡ ಜಿಲ್ಲೆ ಟಾಫ್ ಹತ್ತರಲ್ಲಿ ಬರುತ್ತಿತ್ತು. ಆದರೆ, ಅದು ಆಗದೇ ಇರುವುದು ವ್ಯವಸ್ಥೆಯನ್ನ ತೋರಿಸತ್ತೆ.
ಈಗಲಾದರೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಎಚ್ಚೆತ್ತುಕೊಳ್ಳಬೇಕಿದೆ. ಶಿಕ್ಷಣದ ಕಾಳಜಿ ಹೊಂದಿರುವ ಡಿಡಿಪಿಐ ಅವರನ್ನ ತರಬೇಕಿದೆ. ಬರೀ ಮಾತಿಗಷ್ಟೇ ಉದ್ಧಾರವಾಗಬೇಕಾದರೇ, ಈಗ ಇದ್ದವರೇ ಮುಂದುವರೆಯಲಿ ಬಿಡಿ.