ಕೋಟೂರ “ಶಂಕ್ರಯ್ಯ”ನ ಕೊಂದ “ದೀಪಕ-ನಟರಾಜ್” ಹೆಡಮುರಿಗೆ ಕಟ್ಟಿದ ಗರಗ ಠಾಣೆ ಪೊಲೀಸ್ರು….!!!

ಹತ್ಯೆಯಾದ ಕೆಲವೇ ಕ್ಷಣಗಳಲ್ಲಿ ಶಂಕ್ರಯ್ಯನ ಮಗ-ಮಡದಿ ಹೇಳಿದ್ದು, ಹೀಗಿತ್ತು….
ಧಾರವಾಡ: ಕೋಟೂರ ಗ್ರಾಮದ ಮನೆಯ ಮುಂದೆ ಕೂತಿದ್ದ ಗ್ರಾಮ ಪಂಚಾಯತಿ ಸದಸ್ಯನನ್ನ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನ ಬಂಧಿಸಯವಲ್ಲಿ ಗರಗ ಠಾಣೆಯ ಇನ್ಸಪೆಕ್ಟರ್ ಸಮೀರ ಮುಲ್ಲಾ ತಂಡ ಯಶಸ್ವಿಯಾಗಿದೆ.
ಶಂಕ್ರಯ್ಯ ಪಂಚಯ್ಯ ಮಠಪತಿ ಎಂಬುವವರನ್ನ ಅದೇ ಗ್ರಾಮದ ದೀಪಕ ಕಮ್ಮಾರ ಮತ್ತು ನಟರಾಜ ಹಡಕರ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಮುಂದಾಗಿದ್ದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಕೊಲೆಗೆ ಹಳೆಯ ವೈಷಮ್ ಕಾರಣವೆಂದು ಹೇಳಲಾಗಿದೆ.