ಅಮ್ಮಿನಬಾವಿಯಲ್ಲಿ “ಪರಶುರಾಮ”ನ್ನ ಕೊಂದ “ದ್ಯಾಮಣ್ಣ”- ಜಾಗಕ್ಕಾಗಿ ಜಗಳ…

ಧಾರವಾಡ: ಮನೆಯ ಪಕ್ಕದ ಜಾಗಕ್ಕಾಗಿ ನಡೆದ ಜಗಳ ವಿಕೋಪ ಹೋದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಹತ್ಯೆಯಾಗಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸಂಭವಿಸಿದೆ.
ಪರಶುರಾಮ ಗಾಣಗೇರ (50) ಕೊಲೆಯಾದ ವ್ಯಕ್ತಿಯಾಗಿದ್ದು, ನಿನ್ನೆ ತಡರಾತ್ರಿ ಪರಶುರಾಮ ಗಾಣಿಗೇರ ಹಾಗೂ ದ್ಯಾಮಣ್ಣ ಬಡಿಗೇರ ನಡುವೆ ಗಲಾಟೆಯಾಗಿ ಪರಶುರಾಮ ಕೊಲೆಯಾಗಿದೆ.
ಮನೆಯ ಪಕ್ಕದ ಜಾಗದ ವಿಚಾರವಾಗಿ ನಡೆದ ಗಲಾಟೆ ಆರಂಭವಾಗಿತ್ತು. ಈ ಸಮಯದಲ್ಲಿ ಚಾಕುವಿನಿಂದ ಚುಚ್ಚಿ ತಲೆ ಮೇಲೆ ಕಲ್ಲು ಹಾಕಿದ್ದರಿಂದ ತೀವ್ರವಾದ ರಕ್ತಸ್ರಾವವಾಗಿತ್ತು.
ಗಲಾಟೆ ನಡೆದ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುವ ಮಾರ್ಗಮಧ್ಯೆ ಪರಶುರಾಮ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.