ಕುಸುಗಲ್ ಬಳಿ ಭೀಕರ ಅಪಘಾತ- ಬಿಜೆಪಿ ಕಟ್ಟಾ ಕಾರ್ಯಕರ್ತ ದುರ್ಮರಣ, ಕುಟುಂಬದವರಿಂದ ನೇತ್ರದಾನ…!!!

ಹುಬ್ಬಳ್ಳಿ: ಬೈಕಿನಲ್ಲಿ ಹೋಗುತ್ತಿದ್ದ ಯುವಕನೋರ್ವನಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿ ಬೈಕ್ ಸವಾರ ಸಾವಿಗೀಡಾದ ಘಟನೆ ಕುಸುಗಲ್ ಬಳಿ ಸಂಭವಿಸಿದೆ.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ರವಿ ಬಾಳಿಕಾಯಿ ಎಂಬ 32 ವರ್ಷದ ಯುವಕನೇ ಘಟನೆಯಲ್ಲಿ ಸಾವಿಗೀಡಾಗಿದ್ದು, ಬಾಳಿಕಾಯಿ ಅವರ ಕುಟುಂಬ ರವಿ ಅವರ ಎರಡು ಕಣ್ಣುಗಳನ್ನ ದಾನ ಮಾಡುವ ಮೂಲಕ ದುಃಖದ ಸಮಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ರವಿ ಬಾಳಿಕಾಯಿ ಅವರ ನಿಧನದ ವಿಷಯಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಕಟ್ಟಾ ಬಿಜೆಪಿ ಕಾರ್ಯಕರ್ತನ ಸಾವು ಪಕ್ಷಕ್ಕೆ ಭರಿಸಲಾದ ನಷ್ಟವಾಗಿದೆ ಎಂದಿರುವ ಮಾಜಿ ಸಚಿವರು, ರವಿ ಅವರ ನೋವನ್ನ ಭರಿಸುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.