ಸೈನಿಕರ ಮನೆ ವಸ್ತು, ಬೈಕ್ ಎಗರಿಸಿದ್ದ “ರಾಮನಕೊಪ್ಪದ ವಿಠ್ಠಲ ಕುರಾಡಿ”ಯ ಹೆಡಮುರಿಗೆ ಕಟ್ಟಿದ ಹುಬ್ಬಳ್ಳಿ ಪೊಲೀಸರು…

ಹುಬ್ಬಳ್ಳಿ: ಇಬ್ಬರು ಸೈನಿಕರ ಮನೆಯ ವಸ್ತುಗಳ ಜೊತೆಗೆ ಮೂರು ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನವನ್ನೇ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ವೀಡಿಯೋ…
17.04.2025 ರಂದು ರಾತ್ರಿ 11-45 ಗಂಟೆಗೆ ಮಿನಿ ಅಶೋಕ ಲೈಲ್ಯಾಂಡ ಗೂಡ್ಡ ವಾಹನ ನಂಬರ ಕೆ.ಎ-22, ಎಎ-5746 ನೇದ್ದರಲ್ಲಿ ಇಬ್ಬರು ಸೈನಿಕರ ಮನೆಯ ವಸ್ತುಗಳನ್ನು ಚನೈದಿಂದ ಕಾರವಾರ ಹಾಗೂ ಗೋವಾ ಕಡೆಗೆ ತೆಗೆದುಕೊಂಡು ಹೋಗುವಾಗ ಪೂನಾ ಬೆಂಗಳೂರ ರಾಷ್ಟ್ರೀಯ ಹೆದ್ದಾರಿ, ಕಾರವಾರ ರೋಡ ಬೈಪಾಸ ಹತ್ತಿರ ವಾಹನದ ಚಾಲಕ ಊಟ ಮಾಡಲು ನಿಲ್ಲಿಸಿದಾಗ ವಾಹನವನ್ನು ಮತ್ತು ವಾಹನದಲ್ಲಿದ್ದ 3 ವಿವಿಧ ಕಂಪನಿಯ ಮೊಟಾರ ಸೈಕಲ್ಲಗಳು, ಹಾಗೂ ಗೃಹ ಬಳಕೆಯ ವಸ್ತುಗಳ ಒಟ್ಟು 15,50,000/- ರೂ ಕಿಮ್ಮತ್ತಿನವುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಹಾಯಕ ಪೊಲೀಸ್ ಆಯುಕ್ತ ಯು.ಬಿ.ಚಿಕ್ಕಮಠ, ಹುಬ್ಬಳ್ಳಿ ಶಹರ ದಕ್ಷಿಣ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಎಮ್. ಎನ್. ಸಿಂಧೂರ. ಪೊಲೀಸ್ ಇನ್ಸಪೆಕ್ಟರ್ ಹಳೇಹುಬ್ಬಳ್ಳಿ, ಬಿ.ಎನ್.ಸಾತಣ್ಣವರ. (ಪಿ.ಎಸ್.ಐ) ಹಳೇಹುಬ್ಬಳ್ಳಿ, ವಿಶ್ವನಾಥ ಆಲಮಟ್ಟಿ (ಪಿ.ಎಸ್.ಐ) ಹಳೇಹುಬ್ಬಳ್ಳಿ ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಪಿ.ಬಿ.ಕಾಳೆ, ಸಿಹೆಚ್‌ಸಿ ರವರಾದ ಅಭಯ ಕಟ್ನಳ್ಳಿ, ಕೃಷ್ಣಾ ಮೊಟೆಬೆನ್ನೂರ, ನಾಗರಾಜ ಕೆಂಚಣ್ಣನವರ, ಬಸವರಾಜ ಚವ್ಹಾಣ, ಡಿ.ಬಿ.ಚಂಡೂನವರ, ಜೆ.ಎಸ್.ಮತ್ತಿಗಟ್ಟಿ ಸಿಪಿಸಿ ರವರಾದ ರಮೇಶ ಹಲ್ಲೆ, ಕಲ್ಲನಗೌಡ ಗುರನಗೌಡ್ರ ಹಾಗೂ ವಿಠಲ ಹೊಸಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿತನಾದ ವಿಠಲ ತಂದೆ ಬಸಪ್ಪ ಕುರಾಡಿ ವಯಾ: 27 ವರ್ಷ, ಸಾ: ರಾಮನಕೊಪ್ಪ ತಾ: ಕುಂದಗೋಳ ಜಿ: ಧಾರವಾಡ ಈತನಿಗೆ ಕಲಘಟಗಿ ತಾಲೂಕ ಗಂಜಿಗಟ್ಟಿ ಗ್ರಾಮದ ಹತ್ತಿರ ಪತ್ತೆ ಮಾಡಿ, ಅವನಿಂದ ಮಿನಿ ಅಶೋಕ ಲೈಲ್ಯಾಂಡ ಗೂಡ್ಸ್ ವಾಹನ, ಅದರಲ್ಲಿದ್ದ ಒಟ್ಟು 3 ಮೊಟಾರ ಸೈಕಲ್ಲುಗಳು, ಗೃಹ ಬಳಕೆಯ ಸಾಮಾನುಗಳು ಹೀಗೆ ಒಟ್ಟು 15,50,000/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ.