“ಬಡವರ ಮಗನ ಹೋರಾಟಕ್ಕೆ JDS ಸಾಥ್: ಕುರಿ ಕಾಯಲು ತೋಳ ನೇಮಕ…!!!

ಧಾರವಾಡ: ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ರಸ್ತೆಯ ವಿಷಯವನ್ನ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಹೊರಹಾಕಿದ ನಂತರ, ಹಲವು ಕ್ರಮಗಳು ಆರಂಭಗೊಂಡಿದ್ದು, ಇದೀಗ ಈ ಹೋರಾಟಕ್ಕೆ ಜೆಡಿಎಸ್ ಕೂಡಾ ಬೆಂಬಲವಾಗಿ ನಿಂತಿದೆ.
ಹಳ್ಳಿಗೇರಿ ವ್ಯಾಪ್ತಿಯಲ್ಲಿ ನಡೆದ ಮರಗಳ ಮಾರಣಹೋಮದಂತ ಅನಾಚಾರ ನಡೆದಿದ್ದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಡಿಎಫ್ಓ ಸಮೇತ ಎಲ್ಲರನ್ನ ಅಮಾನತ್ತು ಮಾಡಬೇಕೆಂದು ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಆಗ್ರಹಿಸಿದ್ದಾರೆ.
ಎಸಿಎಫ್ ಪರಿಮಳ ಅವರು ಯಾರು, ಎಲ್ಲಿಯವರು ಎಂಬುದು ಎಲ್ಲರಿಗೂ ಗೊತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದನ್ನ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.