Posts Slider

Karnataka Voice

Latest Kannada News

ಧಾರವಾಡದ ತೇಜು ಡೆವಲಪರ್ಸ್‌ಗೆ ತಕ್ಕ ಪಾಠ ಕಲಿಸಿದ ಗ್ರಾಹಕರ ಆಯೋಗ…!!!

Spread the love

ತೇಜು ಡೆವಲಪರ್ಸ್‍ಗೆ ಬಡ್ಡಿಯೊಂದಿಗೆ ಮುಂಗಡ ಹಣ ಪಾವತಿಸುವಂತೆ ಆಯೋಗದ ಆದೇಶ

ಧಾರವಾಡ: ಹುಬ್ಬಳ್ಳಿಯ ಸತ್ತೂರಿನ ತೇಜು ಡೆವಲಪರ್ಸ್‍ನ ಮಾಲಕರಾದ ಮಂಜುನಾಥ ಸಣ್ಣಮ್ಮನವರ ಎಂಬುವವರು ಗೊಲ್ಡನ್ ಪಾರ್ಕ ಫೇಸ್-2ನಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಲೇಔಟನಲ್ಲಿ, ಧಾರವಾಡದ ಗಾಂಧಿನಗರದ ಗುರುಸಿದ್ದಪ್ಪ ಕೋಟೂರ, ದೀಪಾ ತಕ್ಕಲಕಿ ಹಾಗೂ ಟಿಕಾರೆ ರೋಡ ಮತ್ತು ಮೃತ್ಯಂಜಯ್ಯ ನಗರದ ಮಂಜುನಾಥ ಹರಗೊಪ್ಪ ಮತ್ತು ವೀರೇಶಕುಮಾರ ಕೋಟೂರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ತೇಜು ಡವಲಪರ್ಸ್ ಜೊತೆ ಪ್ಲಾಟ ನಂ.22, 21, 23 ಹಾಗೂ 267 ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಪ್ಲಾಟ್‍ಗೆ ಕಂತುಗಳ ಮುಖಾಂತರ ರೂ.4,50,000 ಹಾಗೂ ರೂ.5,40,000 ರೂಪಾಯಿ ಹಣ ಸಂದಾಯ ಮಾಡಿದ್ದರು. ಸಾಕಷ್ಟು ಕಾಲಾವಕಾಶ ಕಳೆದರೂ ಬಿಲ್ಡರ ಲೇಔಟ್ ನಿರ್ಮಾಣ ಮಾಡದೇ, ತಮಗೆ ಬುಕ್ ಮಾಡಿದ ಸೈಟ್‍ಗಳನ್ನು ಕೊಡದೇ ಸೇವಾ ನೂನ್ಯತೆ ಎಸಗಿ ಮತ್ತು ಮೋಸ ಮಾಡಿದ್ದಾರೆ ಅಂತಾ ಹೇಳಿ ದೂರುದಾರರು ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲಾ ಗ್ರಾಹಕರ ಆಯೋಗಕ್ಕೆ ದಿ:23/10/2024 ರಂದು ಈ ದೂರನ್ನು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಪೂರ್ತಿ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲ್ಯಾಟುಗಳನ್ನು ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಈ ಬಗ್ಗೆ ತೇಜು ಬಿಲ್ಡರ್ ಹಾಗೂ ಡೆವಲಪರ್‍ನ ಮಾಲೀಕರಾದ ಮಂಜುನಾಥ ಸಣ್ಣಮ್ಮನವರರವರು ದೂರುದಾರರಿಂದ ಪಡೆದ ಮುಂಗಡ ಹಣ ರೂ.4,50,000 ಮತ್ತು ರೂ.5,40,000 ಕ್ಕೆ ಶೆ.10 ರಂತೆ ಹಣ ಸಂದಾಯವಾದ ದಿನಾಂಕದಿಂದ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ಪೂರ್ತಿ ಹಣಕೊಡಲು ಆಯೋಗ ಆದೇಶಿಸಿದೆ. ಜೊತೆಗೆ ದೂರುದಾರರು ಅನುಭವಿಸಿದ ಮಾನಸಿಕ ತೊಂದರೆ ಹಾಗೂ ಅನಾನುಕೂಲತೆಗಾಗಿ ತಲಾ ರೂ.50,000 ಪರಿಹಾರ ಹಾಗೂ ತಲಾ ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತೇಜು ಡವಲಪರ್ಸ್‍ಗೆ ನಿರ್ದೇಶಿಸಿದೆ.


Spread the love

Leave a Reply

Your email address will not be published. Required fields are marked *