Karnataka Voice

Latest Kannada News

ಧಾರವಾಡ: ಕ್ರೈಂನ “Before-After” ಸ್ಟೋರಿಯನ್ನ ಮೀರಿಸಿದ ಪಾಲಿಕೆ ಅಧಿಕಾರಿಗಳು…!!!

Spread the love

ಧಾರವಾಡ: ಅವಳಿನಗರದಲ್ಲಿನ ರಸ್ತೆಯಲ್ಲಿ ಬೈಕಿನಲ್ಲಿ ಎರ್ರಾಬಿರ್ರಿ ಹೋಗುವ ಹುಡುಗರು ಸಾಮಾಜಿಕ ಜಾಲತಾಣದಲ್ಲಿ ಕಂಡ ಮೇಲೆ ಅವರನ್ನ ಕರೆದು “ಆರತಿ” ಎತ್ತಿ ಕಳಿಸುವ ಪೊಲೀಸರ ‘Before-After’ ವೀಡಿಯೋಗಳನ್ನ ನೀವು ಬಹಳಷ್ಟು ನೋಡಿರಬಹುದು. ಆದರೆ, ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಡಿದ ಅತ್ಯುತ್ತಮ ಕಾರ್ಯದ ವೀಡಿಯೋ ನೀವೂ ನೋಡಿರಲ್ಲ.

ಹಾಗಾಗಿಯೇ, ಅವರು ಮಾಡಿರುವ ಉತ್ತಮ ಕಾರ್ಯದ ವೀಡಿಯೋ ಇಲ್ಲಿದೆ. ಪೂರ್ಣವಾಗಿ ನೋಡಿಬಿಡಿ..

ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಹಾಗೂ ಆರೋಗ್ಯ ಅಧಿಕಾರಿ ಪದ್ಮಾವತಿ ತುಂಬಗಿ ಅವರುಗಳು ಕೂಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಕಂಡ ಅವ್ಯವಸ್ಥೆಯನ್ನ ತಾವೇ ಮುಂದೆ ನಿಂತು ಸರಿಪಡಿಸಿದ್ದಾರೆ.

ಬೇಂದ್ರೆನಗರದಲ್ಲಿನ ಹಾಸ್ಟೆಲ್ ಮುಂದೆ ಮುಳ್ಳಿನ ಗಿಡಗಳಿಂದ ಕಾಣದಂತಾಗಿತ್ತು. ವಿದ್ಯಾರ್ಥಿಗಳು ಭಯದಿಂದ ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಬ್ಬರು ಅಧಿಕಾರಿಗಳ ಕಾರ್ಯಕ್ಷಮತೆಯಿಂದ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.

ಈ ವಿಷಯವಾಗಿ ಕೆಲವರು “ಅವರ್ ಕೆಲ್ಸಾ ಅವರ ಮಾಡ್ಯಾರ್. ಇದ್‌ರಾಗ್ ಏನ್ ದೊಡ್ಡದ್ ಐತೀ” ಎಂದು ಕುಹಕವಾಡಬಹುದು. ಹಾಗಂದುಕೊಂಡವರು ಊರಿಗೆ ಮಾರಿ ಮನೆಗೆ ಹೆಮ್ಮಾರಿ ಎನ್ನುವುದು ಖಚಿತ.


Spread the love

Leave a Reply

Your email address will not be published. Required fields are marked *