ಇಂಗಳಹಳ್ಳಿ ಸಹಕಾರಿ ಸಂಘಕ್ಕೆ ಗಂಗಣ್ಣ ದುಂದೂರ ಅಧ್ಯಕ್ಷ- ಅವರಿವರ ಮನೆ ಬಾಗಿಲು ಕಾದವರಿಗೆ ಬಿಗ್ ಶಾಕ್…!!!

ಹುಬ್ಬಳ್ಳಿ: ಇಂಗಳಹಳ್ಳಿ ಸಹಕಾರಿ ಕೃಷಿ ಪತ್ತಿನ ಸ್ವಸಹಾಯ ಸಂಘದ ಆಯ್ಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗಂಗಣ್ಣ ದುಂದೂರ್ ಅಧ್ಯಕ್ಷರಾಗಿ, ಲಲಿತಾ ಶಂಕರಗೌಡ ಪಾಟೀಲ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಗ್ರಾಮದ ಐಕ್ಯತೆಗಾಗಿ ಸಂಘವೂ ಉತ್ತಮ ಕಾರ್ಯ ಮಾಡಲಿ ಎಂದು ಬಯಸಿದ ಹಲವರು, ಗ್ರಾಮದಲ್ಲಿ ಚುನಾಯಿತರಾದ ಎಲ್ಲರೂ ಒಗ್ಗಟ್ಟಾಗಿ ಸಂಘದ ಪದಾಧಿಕಾರಿಗಳಾಗಲು ಮುಂದಾಗಿದ್ದರು. ಆದರೆ, ಕೆಲವರು ಭಿನ್ನಮತ ಸೃಷ್ಟಿಸುವ ನಿರಂತರ ಪ್ರಯತ್ನ ಮಾಡಿದ್ದು ಜಿಲ್ಲೆಯಲ್ಲಿ ಸದ್ದು ಮಾಡಿತ್ತು.
ಚುನಾಯಿತ ಪ್ರತಿನಿಧಿಗಳನ್ನ ಒಗ್ಗೂಡಿಸುವಲ್ಲಿ ಮತ್ತೂ ಗಂಗಣ್ಣ ದುಂದೂರ ಅವರನ್ನ ಅಧ್ಯಕ್ಷ, ಲಲಿತಾ ಪಾಟೀಲ ಅವರನ್ನ ಉಪಾಧ್ಯಕ್ಷರನ್ನಾಗಿ ಮಾಡಲು ಮಲ್ಲಿಕಾರ್ಜುನ ಹೊರಕೇರಿ ಹಾಗೂ ನಿಂಗನಗೌಡ ಮರಿಗೌಡರ ಪ್ರಯತ್ನ ಯಶಸ್ವಿಯಾಯಿತು. ಹಾಗಾಗಿ, ಗೊಂದಲ ಸೃಷ್ಟಿಸಲು ಅವರಿವರ ಬಳಿ ಹೋದವರಿಗೆ ಗುನ್ನ ಬಿದ್ದಂತಾಗಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮುತ್ತಣ್ಣ ಗಾಳಪ್ಪನವರ್, ಸೋಮಣ್ಣ ಪಟ್ಟಣಶೆಟ್ಟಿ, ಮುತ್ತಣ್ಣ ಚಾಕಲಬ್ಬಿ, ರೋಹಿತ್ ಮತ್ತಿಹಳ್ಳಿ ಸೇರಿದಂತೆ ಹಲವರು ಸತ್ಕರಿಸಿದರು.