“DHARWAD GYMKHANA” ನಾಮಫಲಕ ಬದಲಾವಣೆ- ಬಿಗ್ ಇಂಪ್ಯಾಕ್ಟ್…!!!

ಧಾರವಾಡ: ಕೊನೆಗೂ ಕೆಲವೇ ಗಂಟೆಗಳಲ್ಲಿ ನಾಮಫಲಕವನ್ನ ಬದಲಾವಣೆ ಮಾಡಲಾಗಿದೆ. ಕರ್ನಾಟಕವಾಯ್ಸ್. ಕಾಂನ ಸುದ್ದಿಗೆ ಎಚ್ಚೆತ್ತುಕೊಳ್ಳಲಾಗಿದ್ದು, ತಾತ್ಕಾಲಿಕವಾಗಿ ಹಾಕಿರುವ ಬ್ಯಾನರ್‌ಗೆ ಕಾಯಕಲ್ಪ ನೀಡಬೇಕಿದೆ.
ಧಾರವಾಡ ಜಿಮಖಾನಾ ಕ್ಲಬ್ ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲೊಂದು. ಆದರೆ, ಕನ್ನಡವನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿತ್ತು. ಇದನ್ನ ಮನಗಂಡ ಕರ್ನಾಟಕವಾಯ್ಸ್. ಕಾಂ ಸಾರ್ವಜನಿಕರ ಗಮನ ಸೆಳೆಯಲು ಮಾಹಿತಿಯನ್ನ ಹಂಚಲಾಗಿತ್ತು.
ಬೆಳಗಾಗುವುದರೊಳಗೆ ಸರಕಾರಿ ಸ್ವಾಮ್ಯದ DHARWAD GYMKHANA ನಾಮಫಲಕ ಬದಲಾಗಿ ಕನ್ನಡದಲ್ಲಿ “ಧಾರವಾಡ ಜಿಮಖಾನಾ” ಬ್ಯಾನರ್ ಅಳವಡಿಸಲಾಗಿದೆ. ಈ ಮೂಲಕ ಸರಕಾರದ ಆದೇಶವನ್ನ ಸರಕಾರಿ ಅಧಿಕಾರಿಗಳು ಪಾಲನೆ ಮಾಡಿದ್ದಾರೆ.
ಆಂಗ್ಲ ಭಾಷೆಯಲ್ಲಿ ಇದ್ದ ನಾಮಫಲಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ತೀವ್ರ ಬೇಸರವ್ಯಕ್ತಪಡಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.