ಧಾರವಾಡ: ಭೀಕರ ಘಟನೆ- ಬೈಕಿನಲ್ಲಿದ್ದ ಮೂವರು ಸ್ನೇಹಿತರ ದುರ್ಮರಣ….!!!

ಧಾರವಾಡ: ವೇಗವಾಗಿ ಹೊರಟಿದ್ದ ಬೈಕ್ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿ ಸಾವಿಗೀಡಾದ ಘಟನೆ ಗರಗ ಪೊಲೀಸ್ ಠಾಣೆ ವ್ಯಾಪ್ತಿಯ ಹೈವೇನಲ್ಲಿ ಸಂಭವಿಸಿದೆ.
ಮೃತ ಯುವಕರನ್ನ ಕೋಟೂರಿನ ಇರ್ಫಾನ ಹುಸೇನಸಾಬ ಸಂಗೊಳ್ಳಿ, ಹೆಗ್ಗೇರಿಯಲ್ಲಿ ವಾಸಿಸುತ್ತಿದ್ದ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಶಿವರಾಜ ಹನಮಪ್ಪ ಮುದಕಣ್ಣನವರ ಹಾಗೂ ಬೈಲಹೊಂಗಲದ ಜುಬೇರ ಜಯೀರ್‌ಅಹ್ಮದ ಬಾಗೇವಾಡಿ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಕ್ಷಕರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.