ಹುಬ್ಬಳ್ಳಿ ‘ಆನಂದ’ನಗರ ಮದರಸಾಗೆ ಸಡನ್ನಾಗಿ ಭೇಟಿ ನೀಡಿದ ಪೊಲೀಸ್ ಕಮೀಷನರ್….!!!

ಹುಬ್ಬಳ್ಳಿ: ಅವಳಿನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಆನಂದನಗರದ ಮದರಸಾಗೆ ಸಡನ್ನಾಗಿ ಭೇಟಿ ನೀಡಿದಾಗ, ನಾಲ್ಕು ವರ್ಷದ ಮಗುವೊಂದು ಅವರ ಗಮನ ಸೆಳೆಯಿತು.
ಹೌದು… ನಾಲ್ಕು ವರ್ಷದ ಉಮೇರಾ ಎಂಬ ಮಗು ಎಷ್ಟೊಂದು ಚೆನ್ನಾಗಿ ಅಭ್ಯಾಸ ಮಾಡಿ, ಕಮೀಷನರ್ ಮುಂದೆ ಹೇಳಿದ್ದು, ಐಪಿಎಸ್ ಶಶಿಕುಮಾರ್ ಅವರಲ್ಲಿ ಸಂತಸ ಮೂಡಿಸಿತು.
ಉಮೇರಾ ಮತ್ತು ಪೊಲೀಸ್ ಕಮೀಷನರ್ ವೀಡಿಯೋ
ಮಗುವಿನ ಶಿಕ್ಷಣ ನೋಡಿ, ಸ್ಥಳೀಯವಾಗಿ ನೆರೆದಿದ್ದ ಸಾರ್ವಜನಿಕರಿಗೆ ಪೊಲೀಸ್ ಕಮೀಷನರ್ ಮನವಿ ಮಾಡಿಕೊಂಡರು. ಹೆಣ್ಣು ಮಕ್ಕಳನ್ನ ಉತ್ತಮವಾಗಿ ಶಿಕ್ಷಣ ಕೊಡಿಸಿ, ಅವರು ನಿಮಗೆ ಬದುಕು ಕೊಡುತ್ತಾರೆ ಎಂದರು.