ಹುಬ್ಬಳ್ಳಿಯಿಂದ “ಬೈಕ್” ಮೂಲಕ ತೆರಳಿ ಮಹಾಕುಂಭದಲ್ಲಿ ಭಾಗಿಯಾದ ‘ರಾಮ ಭಕ್ತ ರಾಮು’….!!!
ಹುಬ್ಬಳ್ಳಿ: ನಗರದ ಯುವಕನೋರ್ವ ಮಹಾಕುಂಭದಲ್ಲಿ ಭಾಗವಹಿಸಲು ಬೈಕಿನಲ್ಲಿ ಪ್ರಯಾಣ ಬೆಳೆಸಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಸುಖಕರವಾಗಿ ಮರಳಿದ್ದು, ಹಿಂದು ಮುಖಂಡರು ಸಹೃದಯತೆಯಿಂದ ಸತ್ಕರಿಸಿದ್ದಾರೆ.
ಮಾರುತಿನಗರದ ರಾಮು ಬೆಟಗೇರಿ ಎಂಬುವವರೇ ಸುಮಾರು ಮೂರುವರೆ ಸಾವಿರ ಕಿಲೋಮೀಟರ್ ಬೈಕಿನಲ್ಲಿ ಸಂಚರಿಸಿ, ಪುಣ್ಯಸ್ನಾನ ಮಾಡಿದ್ದಾರೆ. ರಾಮು ಬೆಟಗೇರಿಯ ಭಕ್ತಿಯ ಸ್ವರೂಪ ಇದಾಗಿದೆ.
ಹುಬ್ಬಳ್ಳಿಯ ಹಿಂದು ಮುಖಂಡರಾದ ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಸಂದೀಪ ಬೂದಿಹಾಳ, ಉಮೇಶ ದುಷಿ ಸೇರಿದಂತೆ ಹಲವರು ಸತ್ಕರಿಸಿ, ರಾಮುಗೆ ಹರಿಸಿದ್ದಾರೆ.