ಹೋರಾಟಗಾರ ಬಸವರಾಜ ಕೊರವರ ಬಗ್ಗೆ ಬಿಗ್ ಅಪ್ಡೇಟ್- ಶಾಕ್ ಆಗೋ ವಿಷಯವಿದು…!!!
ಧಾರವಾಡ: ಸಾಮಾಜಿಕ ಹೋರಾಟಗಾರ, ನಿರಂತರವಾಗಿ ಬಡವರ ಪರ ನಿಲ್ಲುವ ಬಸವರಾಜ ಕೊರವರ ಅವರು ಹೊಸದೊಂದು ನಿರ್ಣಯವನ್ನ ತೆಗೆದುಕೊಂಡಿದ್ದು, ಅವರಿರದ ಸಮಯದಲ್ಲೂ ಅವರು ಜನರಿಗೆ ಉಪಯೋಗ ಆಗಬೇಕೆಂಬ ಮಹತ್ವಾಕಾಂಕ್ಷೆಯ ನಿರ್ಧಾರವನ್ನ ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.
ಹೌದು… ಧಾರವಾಡ ಜಿಲ್ಲೆಯೂ ಸೇರಿದಂತೆ ಹಲವೆಡೆ ಖ್ಯಾತಿ ಪಡೆದಿರುವ ಬಡವರ ಮಗನೆಂದೇ ಗುರುತಿಸಲ್ಪಡುವ ಬಸವರಾಜ ಕೊರವರ ಅವರು, ತಮ್ಮ ಹುಟ್ಟುಹಬ್ಬದ ದಿನ ತೆಗೆದುಕೊಂಡ ನಿರ್ಣಯ ಏನು ಎಂಬುದನ್ನ ಅವರೇ ಹೇಳಿದ್ದಾರೆ, ಇಲ್ಲಿದೆ ನೋಡಿ…
ಹೋರಾಟಗಾರ ಬಸವರಾಜ ಕೊರವರ ಅವರ ಜೊತೆಗಿದ್ದ 50 ಯುವಕರು ಕೂಡಾ, ತಾವಿಲ್ಲದ ಕಾಲದಲ್ಲಿ ತಮ್ಮ ಅಂಗಾಂಗಳನ್ನ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಧಾರವಾಡ ಜಿಲ್ಲೆಯಲ್ಲಿ ಹೊಸದೊಂದು ಮನ್ವಂತರಕ್ಕೆ ನಾಂದಿಯಾಗಿದೆ.