ರಾಜ್ಯದಲ್ಲಿ ನಾಳೆ ಸರಕಾರಿ ರಜೆ ಘೋಷಿಸಿದ ಸಿಎಂ ಸಿದ್ಧರಾಮಯ್ಯ….
![](https://karnatakavoice.com/wp-content/uploads/2024/12/InShot_20241226_232340012.jpg)
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಸರಕಾರಿ ರಜೆ ಘೋಷಣೆ ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಏಳು ದಿನಗಳವರೆಗೆ ಶೋಕಾಚರಣೆಯ ಜೊತೆಗೆ ನಾಳೆಯಂದು ಸರಕಾರಿ ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿಯಲ್ಲಿ ನಡೆಯಬೇಕಾಗಿದ್ದ ಸಮಾವೇಶ ಕೂಡಾ ರದ್ದಾಗಿದ್ದು, ಸರಕಾರಿ ರಜೆ ಘೋಷಣೆ ಮಾಡಲಾಗಿದೆ.