ಭೀಕರ ಅಪಘಾತ- ಹರಿಹರದ ನಾಲ್ವರು ದುರ್ಮರಣ: ಹುಬ್ಬಳ್ಳಿಗೆ ಗಾಯಾಳು ರವಾನೆ…

ಹುಬ್ಬಳ್ಳಿ: ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಎರಡು ಕಾರುಗಳ ನಡುವೆ ಭೀಕರವಾದ ಅಪಘಾತ ಸಂಭವಿಸಿದ್ದು, ಓರ್ವ ಮಗು, ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವಿಗೀಡಾಗಿದ್ದಾರೆ.
ಅಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿದ್ದು, ರಸ್ತೆಯುದ್ದಕ್ಕೂ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಘಟನೆಯಲ್ಲಿ ಸಾವಿಗೀಡಾದವರನ್ನ ಬೆಂಗಳೂರಿನ ಚಾಮರಾಜಪೇಟೆಯ 59 ವಯಸ್ಸಿನ ಚಂದ್ರಮ್ಮ, ಹರಿಹರದ 38ವಯಸ್ಸಿನ ಮೀನಾ, 41 ವರ್ಷದ ಮಹೇಶ್ ಕುಮಾರ್ ಹಾಗೂ 11 ವರ್ಷದ ಧನವೀರ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.