ಧಾರವಾಡದ ಮುತ್ತೂಟ್ ಫೈನಾನ್ಸ್‌ನಲ್ಲಿ “ಮಹಾಮೋಸ”- ನಾಲ್ವರು ಅರೆಸ್ಟ್… Big Exclusive….
ಧಾರವಾಡ: ನಗರದ ಮುತ್ತೂಟ್ ಪೈನಾನ್ಸ್‌ನಲ್ಲಿ ಮಹಾಮೋಸವೊಂದು ನಡೆದಿದ್ದು, ಕೋಟ್ಯಾಂತರ ರೂಪಾಯಿ ಅವ್ಯವಹಾರ ಬಯಲಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನ ಶಹರ ಠಾಣೆಯ ಇನ್ಸ್‌ಪೆಕ್ಟರ್ ನಾಗೇಶ ಕಾಡದೇವರಮಠ ತಂಡ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮುತ್ತೂಟ್ ಪಿನ್‌ಕಾರ್ಪ್‌ನ ಮ್ಯಾನೇಜರ ಮಹ್ಮದಯಾಸೀನ ಚಾಂದಖಾನ, ಗ್ರಾಹಕರಾದ ಮನ್ಸೂರ ಟೀನವಾಲೆ, ನೇಹಾ ನಬ್ಬುವಾಲೆ ಹಾಗೂ ಶಾಹೀನ ಗಾಣಗಾಪುರ ಎಂಬುವವರನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮ್ಯಾನೇಜರ ಮಹ್ಮದಯಾಸೀನ ಚಾಂದಖಾನ್, ಒಂದು ಲಕ್ಷ ಹಣ ಡಿಪಾಜಿಟ್ ಮಾಡಿದರೇ 20% ಹಣವನ್ನ ನೀಡುವ ಆಮಿಷವೊಡ್ಡಿ 65 ಲಕ್ಷ ರೂಪಾಯಿ ಪಡೆದು, ಕಚೇರಿಯಿಂದ ನಕಲಿ ಪತ್ರಗಳನ್ನ ಮಾಡಿದ್ದಾನೆ.
ಇದೇ ಮ್ಯಾನೇಜರ ಗ್ರಾಹಕರ ಜೊತೆಗೂಡಿ ನಕಲಿ ಚಿನ್ನವನ್ನ ಪಡೆದು 82 ಲಕ್ಷ ರೂಪಾಯಿ ಹಣವನ್ನ ಗ್ರಾಹಕರ ಖಾತೆಗೆ ಹಾಕಿದ್ದಾನೆ. ಈ ಬಗ್ಗೆ ದೂರು ದಾಖಲಾದ ತಕ್ಷಣವೇ ಕಾರ್ಯಪ್ರವೃತ್ತರಾದ ಶಹರ ಠಾಣೆಯ ಇನ್ಸ್‌ಪೆಕ್ಟರ್ ನಾಗೇಶ ಕಾಡದೇವರಮಠ ತಂಡವೂ, ನಾಲ್ವರನ್ನ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.