ಬೆಳೆವಿಮೆ “ಪರಿಹಾರ 50-50”- ರೈತರ ಹೆಸರಿನಲ್ಲಿ ಹೋರಾಟ ಮಾಡೋ “ಈRya”ನೂ ಪಾತ್ರಧಾರಿ…!!!

ಧಾರವಾಡ: ಬಡ ರೈತರ ಹೊಟ್ಟೆಗೆ ಮಣ್ಣು ಹಾಕುವ ಕೆಲ ಶ್ರೀಮಂತ ರೈತರ ಜೊತೆಗೆ ಹಸಿರು ಟವೆಲ್ ಹಾಕಿಕೊಂಡು ಪೋಸು ಕೊಡುವ ಹುಬ್ಬಳ್ಳಿ ತಾಲೂಕಿನ “ಹುಟ್ಟು ಹಾರಾಟಗಾರ ಈರ‌್ಯಾ”ನ ಪಾತ್ರವೂ ಇರುವುದು ಗೋಚರವಾಗಿದೆ.
ತನ್ನ ಬೇಳೆ ಬೇಯಿಸಿಕೊಳ್ಳಲು ಹಸಿರು ಟವೆಲ್ ಹಾಕಿಕೊಂಡು ಸಿಗುವ ನಕಲಿ ಹೋರಾಟಗಾರ ಬೆಳೆವಿಮೆ ಪರಿಹಾರದ ಮೋಸದ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಹೊರಬರತೊಡಗಿದೆ.
ಮಹಾನ ಹಾರಾಟಗಾರನೆಂದು ಪೋಸು ಕೊಡುವ “ಈರ‌್ಯಾ” ತನಗೆ ಗೊತ್ತಿರುವ ನೂರಾರೂ ಜನರಿಗೆ 50-50 ಹಣದ ದುರ್ವವ್ಯವಹಾರದಲ್ಲಿ ಭಾಗವಹಿಸಲು ಪ್ರೇರಪಣೆ ನೀಡಿರುವುದು ರಹಸ್ಯವಾಗಿ ಉಳಿದಿಲ್ಲ.
ಪ್ರಮುಖ ರಾಜಕಾರಣಿಗಳ ಮುಂದೆ ಹಾರಾಟಗಾರನೆಂದು ತೋರಿಸಿಕೊಳ್ಳುವ ಈರ‌್ಯಾ, ರೈತನ ಹೆಸರಿನಲ್ಲಿ ಬಡ ರೈತರಿಗೆ ದ್ರೋಹ ಬಗೆಯುವ ಇಂತವರು ರೈತರ ಹೆಸರಿನಲ್ಲಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ದೂರ್ತರಿಂದ ಅಮಾಯಕ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.
ಬೆಳೆವಿಮೆ ವಂಚನೆಯ ಸ್ವರೂಪದಲ್ಲಿ ನಡೆದಿರುವ ಅಕ್ರಮಗಳ ಸರಮಾಲೆಯಲ್ಲಿ ಬಿಎಎಂಎಸ್ ವೈದ್ಯನೋರ್ವನ ಕೈವಾಡದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.