ಬೆಳೆವಿಮೆ “ಪರಿಹಾರ 50-50”- ಸ್ಥಳೀಯ ‘ಹಾಲಿ-ಮಾಜಿ’ ಜನಪ್ರತಿನಿಧಿಗಳೇ ಏಜೆಂಟರು… ಬಡ ರೈತರ ಬೆನ್ನಿಗೆ ಚೂರಿ…!!!

ಧಾರವಾಡ: ಗ್ರಾಮೀಣ ಮಟ್ಟದಲ್ಲಿ ಬಡ ರೈತರ ಬೆನ್ನಿಗೆ ಚೂರಿ ಹಾಕಿದ ನೀಚತನ ಮಾಡಿರುವ ಪ್ರಕರಣದಲ್ಲಿ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರು ಮತ್ತು ಮಾಜಿಗಳು ಇರುವುದು ಗೊತ್ತಾಗತೊಡಗಿದೆ.
ಮುಂಗಾರಿನ ಹೆಸರು ಬೆಳೆಗೆ ವಿಮೆ ಮಾಡಿಸಿರುವ ಪ್ರಮುಖ ವಂಚಕರ ಜೊತೆಗೂಡಿರುವ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಶಿರಹಟ್ಟಿ, ಗದಗ, ನರಗುಂದ, ಶಿಗ್ಗಾಂವ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳು, ರೈತರ ವಿಮೆ ಹಣವನ್ನ ತಾವೇ ಭರಿಸಿ ’50-50’ಗಾಗಿ ಕಾಯತೊಡಗಿದ್ದಾರೆ.
ಮೂರು ಜಿಲ್ಲೆಯ ಸಾವಿರಾರೂ ಹೆಕ್ಟೇರ್ ಭೂಮಿಗೆ ಹಣ ತುಂಬಿರುವ ರೈತರ ಹೆಸರು ಸಮೇತ ಕರ್ನಾಟಕವಾಯ್ಸ್. ಕಾಂ ಮಾಹಿತಿ ಲಭಿಸಿದೆ. ಕೆಲವು ಗ್ರಾಮದಲ್ಲಿ ಸಾರ್ವಜನಿಕರಿಗೆ ಹಾವು-ಮುಂಗುಸಿ ಎಂದು ತೋರಿಸಿಕೊಳ್ಳುವ ಶ್ರೀಮಂತ ರೈತರು, ವಂಚನೆ ಮಾಡಲು ಒಂದಾಗಿರುವುದು ಕಂಡು ಬರುತ್ತದೆ.
ಈ ವಂಚನೆಯಲ್ಲಿ ಸ್ಥಳೀಯ ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗವಹಿಸಿದ್ದರಿಂದ ಗ್ರಾಮ ಸೇವಕರು, ಪಿಡಿಓಗಳ ಪಾತ್ರ ಹೆಚ್ಚಾಗಿ ಕಂಡು ಬರುತ್ತಿದೆ.
ಈ ವಂಚನೆಯ ಭ್ರಷ್ಟಾಚಾರದಲ್ಲಿ ಓರ್ವ ಬಿಎಎಂಎಸ್ ಎಂಡಿ ಮಾಡಿರುವ ವೈದ್ಯನೋರ್ವ ತನ್ನ ಕರ್ತವ್ಯ ಮರೆತು, ವಂಚನೆಯ ಕೇಂದ್ರ ಬಿಂದುವಾಗಿದ್ದಾನೆ. ಆತನ ಬಗ್ಗೆಯೂ ‘ಕೆವಿ’ ವಿವರವನ್ನ ಬಹಿರಂಗ ಮಾಡಲಿದೆ.