ಬೆಳೆವಿಮೆ “ಪರಿಹಾರ 50-50”- ಮೋಸದ ಹಣದಿಂದ MLA ಕನಸು- ಚಿಕ್ಕಹಂದಿಪಾವಗಡ…!!!

ಧಾರವಾಡ: ಬಡ ರೈತಾಪಿ ವರ್ಗವನ್ನ ದೂರಿಟ್ಟು ಶ್ರೀಮಂತ ರೈತರು ಬೆಳೆವಿಮೆ ಪಡೆಯುವಲ್ಲಿ ಮಾಡುತ್ತಿರುವ ಸರ್ಕಸ್ ಇದೀಗ ಬಟಾಬಯಲಾಗುತ್ತ ಬಂದಿದ್ದು, ಮೋಸದಿಂದ ಹಣ ಗಳಿಸುವ ಪಡೆ ಮೂಲೆ ಮೂಲೆ ಅಲೆದಾಡುತ್ತಿದೆ.
ಅಖಂಡ ಧಾರವಾಡ ಜಿಲ್ಲೆಯ ಮೂಲ ಕರ್ತೃ ಗದಗ ಮೂಲದವರಾಗಿದ್ದು, ಓರ್ವ ಈಗಾಗಲೇ ನಾನೇ ಮುಂದಿನ ಶಾಸಕ ಎಂದು ಫೋಸು ಕೊಡಲಾರಂಭಿಸಿದ್ದಾನೆ. ಕಾಳು ತುಂಬಿಸುವ ಗಿರಾಕಿ, ಹೆಸರು ಕಾಳಿನಿಂದಲೇ ಕೋಟಿ ಕೋಟಿ ಹೊಡೆಯುವ ಲೆಕ್ಕಾಚಾರದಲ್ಲಿದ್ದಾನೆ.
ಸೋಜಿಗ ಅಂದರೇ, ಈ ಆಸಾಮಿ ಮೊನ್ನೆ ಮೊನ್ನೆ ಬರ್ತಡೇಯನ್ನ ಪುಕ್ಕಟ್ಟೆ ಹಣದಲ್ಲಿ ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಆಚರಿಸಿಕೊಂಡ. ಆ ಹಣ ಬೇರೆ ಯಾರದ್ದೂ ಅಲ್ಲ, ಇದೇ ರೈತರದ್ದು, “50-50” ಮಾದರಿಯದ್ದು.
ಇಂತಹ ಎಂಎಲ್‌ಎ ಕನಸು ಕಾಣುವವನ ಜೊತೆಗೆ ಮೊದಲಿಂದಲೂ ಸಾವಿರಾರೂ ಬಡ ರೈತರಿಗೆ ಅನ್ಯಾಯ ಮಾಡಿ ಶ್ರೀಮಂತ ರೈತರ ಜೊತೆಗೂಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದ ‘ದಾಡಿಯ ಚಿಕ್ಕಹಂದಿ’ ಎಂಬುದು ರಹಸ್ಯವಾಗಿ ಉಳಿದಿಲ್ಲ.
ಮುಂಗಾರಿನ ಹೆಸರು ಬೆಳೆಯ ಬೆಳೆವಿಮೆ ಪಡೆಯಲು ಯಾರು ಯಾರು ಯಾವ್ಯಾವ ಐಪಿ ಅಡ್ರೇಸ್‌ನಿಂದ ಹಣ ಕಳಿಸಿದ್ದಾರೆ. ಅಲ್ಲಿರುವ ಕೇಂದ್ರಗಳನ್ನ ನಡೆಸುವವರು ಯಾರೂ ಎಂಬುದು ಕೂಡಾ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯಿದೆ.
ಬಡ ರೈತರಿಗೆ ಅನ್ಯಾಯ ಸರಿಯಾಗುವವರೆಗೆ ಮತ್ತೂ ನೀಚರಿಗೆ ಸರಕಾರ ತಕ್ಕ ಪಾಠ ಕಲಿಸುವವರೆಗೆ ಮಾಹಿತಿಗಳು ನಿಲ್ಲುವುದಿಲ್ಲವೆಂಬ ಸತ್ಯ ಈ ವಂಚನೆಯಲ್ಲಿರುವ ಕೆಲವು ಶ್ರೀಮಂತ ರೈತರು ಮತ್ತೂ ನೀಚ ವಂಚಕರಿಗೆ ತಿಳಿದಿರಲಿ.