“ಭಜರಂಗ” ಗ್ರ್ಯಾನೈಟ್‌ಗೆ ನುಗ್ಗಿದ ‘ಚಿಗರಿ’- ಸ್ಟೇರಿಂಗ್ ಕಟ್, ಚಾಲಕ ಸಮೇತ ಹಲವು ಪ್ರಯಾಣಿಕರಿಗೆ ಗಾಯ…!!!
ಹುಬ್ಬಳ್ಳಿ: ವಾಣಿಜ್ಯನಗರಿಯಿಂದ ವಿದ್ಯಾಕಾಶಿಯತ್ತ ಹೊರಟಿದ್ದ ಬಿಆರ್‌ಟಿಎಸ್ ಚಿಗರಿ ಬಸ್‌ನ ಸ್ಟೇರಿಂಗ್ ಕಟ್ ಆದ ಪರಿಣಾಮ, ಬೈರಿದೇವರಕೊಪ್ಪದ ಬಳಿಯ ಭಜರಂಗ ಗ್ರ್ಯಾನೈಟ್ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಸಂಭವಿಸಿದೆ.
ಘಟನೆ ನಡೆಯುತ್ತಿದ್ದ ಹಾಗೇ, ಕೆಲವರು ಚಾಲಕನನ್ನ ಹೊರಗೆ ತೆಗೆದಿದ್ದಾರೆ. ಪ್ರಯಾಣಿಕರಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನೂ ಹೊರಗೆ ತೆಗೆಯಲಾಗಿದೆ.
ವೀಡಿಯೋ….
ಗ್ರ್ಯಾನೈಟ್ ಅಂಗಡಿಯ ಬಳಿಯೇ ಬಾರ್‌ಯಿದ್ದ ಪರಿಣಾಮ ಕುಡಿದ ಅಮಲಿನಲ್ಲಿದ್ದ ಕೆಲವರು, ಕಲ್ಲು ತೂರಾಟ ನಡೆಸಿದ್ದಾರೆ. ಬಾರ್‌ನಲ್ಲಿದ್ದ ಓರ್ವ ಜನರಿಗೆ ಹೊಡೆಯಲು ಉತ್ತೇಜಿಸುತ್ತಿದ್ದ ವೀಡಿಯೋ ಕೂಡಾ ವೈರಲ್ ಆಗಿದೆ.
ಬಿಆರ್‌ಟಿಎಸ್ ವ್ಯವಸ್ಥೆಯ ಬಗ್ಗೆ ನೂರೆಂಟು ಕಲ್ಪನೆಗಳು ಜನರಲ್ಲಿದ್ದು, ಇದೀಗ ಬಸ್‌ನ ತಾಂತ್ರಿಕ ಸಮಸ್ಯೆಗಳು ಆರಂಭಗೊಂಡಿವೆ. ಚಿಗರಿ ಬಸ್‌ನ ಬಗ್ಗೆ ಈ ಘಟನೆಯಿಂದ ಮತ್ತಷ್ಟು ಆತಂಕ ಹೆಚ್ಚಲಿದೆ. ಹಾಗಾಗದಂತೆ ತಡೆಯಲು ಈ ವ್ಯವಸ್ಥೆಯನ್ನ ‘ಬ್ಯಾನ್’ ಮಾಡುವಂತೆ ಕೂಗು ಮತ್ತಷ್ಟು ಹೆಚ್ಚಾಗಿದೆ.