ಗರಗ ಠಾಣೆ ಇನ್ಸಪೆಕ್ಟರ್ ಸಮೀರ್ ಮುಲ್ಲಾ “ಗ್ರೇಟ್ ವರ್ಕ್”- ಅಮಾನುಷವಾಗಿ ಹತ್ಯೆ ಮಾಡಿದವರು ಅಂದರ್…!!!
ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿಯನ್ನ ಹಾಡುಹಗಲೇ ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನ ಹೆಡಮುರಿಗೆ ಕಟ್ಟುವಲ್ಲಿ ಗರಗ ಠಾಣೆಯ ಇನ್ಸ್‌ಪೆಕ್ಟರ್ ಸಮೀರ್ ಮುಲ್ಲಾ ತಂಡ ಯಶಸ್ವಿಯಾಗಿದೆ.
ಆರೋಪಿಗಳ ಎಕ್ಸಕ್ಲೂಸಿವ್ ಪೋಟೊಗಳು ಇಲ್ಲಿವೆ ನೋಡಿ…
ಗಿರೀಶ ಮಹದೇವಪ್ಪ ಕರಡಿಗುಡ್ಡ ಎಂಬುವವರನ್ನ ಹತ್ಯೆ ಮಾಡಿ ಪರಾರಿಯಾಗಿದ್ದ ಗರಗ ಗ್ರಾಮದ ಖಂಡೋಬಾ ಪಟಧಾರಿ, ಆಕಾಶ ಮಾದಪ್ಪನವರ, ಪ್ರಜ್ವಲ ವಡ್ಡರ ಹಾಗೂ ಮಂಜುನಾಥ ಚಿಕ್ಕೋಪ್ಪ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಿರೀಶನ ಪತ್ನಿ ದೀಪಾ ನೀಡಿದ ದೂರು ಪಡೆದು ಆರೋಪಿಗಳ ಬೆನ್ನು ಬಿದ್ದಿದ್ದ ಗರಗ ಠಾಣೆಯ ವೃತ್ತ ನಿರೀಕ್ಷಕ ಸಮೀರ ಮುಲ್ಲಾ ಟೀಂ, 48 ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.