ಬೆಳೆ ವಿಮೆ “50-50” ವಂಚಕರ ಬೆನ್ನು ಬೀಳಲು ಸಜ್ಜಾದ ಆಡಳಿತ… ರೈತರ ಹೆಸರಲ್ಲಿ “ದುಂಡ”ಗಾಗುವರಿಗಿದೆ ಮಾರಿಹಬ್ಬ…!!!

ಧಾರವಾಡ: ರೈತರ ಹೆಸರಿನಲ್ಲಿ ಹಣ ತಾವೇ ತುಂಬಿ, ಬರುವ ಪರಿಹಾರದಲ್ಲಿ 50-50 ಮಾಡಲು ಹುನ್ನಾರ ನಡೆಸುತ್ತ ಬಂದಿರುವ ನೀಚರ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ವಂಚಕರನ್ನ ಹೆಡಮುರಿಗೆ ಕಟ್ಟುವ ಸಾಧ್ಯತೆಯಿದೆ.
ಆನ್ಲೈನ್ ಮೂಲಕ ಪರಿಹಾರದ ಹಣ ತುಂಬಲು ಅವಕಾಶವೇ ಇಲ್ಲದ ಹಾಗೇ ಸರ್ವರ್ “ಬಿಜಿ” ಮಾಡಿಟ್ಟು, ಆಫ್ಲೈನ್ ಮೂಲಕ ರೈತರ ದಾಖಲೆಗಳನ್ನ ತೆಗೆದುಕೊಂಡು ಹೋಗಿ, ಹಣ ತುಂಬಿರುವ ಮಾಹಿತಿಯನ್ನ ಸಂಬಂಧಿಸಿದ ಅಧಿಕಾರಿಗಳು ಕಲೆ ಹಾಕಿದ್ದಾರೆ.
ಯಾವ ಯಾವ ಗ್ರಾಮದ ಎಷ್ಟೇಷ್ಟು ರೈತರು ಯಾರ ಬಳಿ ದಾಖಲೆ ನೀಡಿದ್ದಾರೆ ಎಂಬುದನ್ನ ಪತ್ತೆ ಹಚ್ಚಲಾಗಿದ್ದು, ಫಿಪ್ಟಿ-ಫಿಪ್ಟಿ ಆಸೆಯಲ್ಲಿ ದಾಖಲೆ ನೀಡಿದ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಅಖಂಡ ಧಾರವಾಡ ಜಿಲ್ಲೆಯ ಪ್ರಮುಖ ತಾಲೂಕಿನ ವ್ಯಕ್ತಿಯೋರ್ವ ಈ ಕರಾಳ ದಂಧೆಯಲ್ಲಿರುವುದನ್ನ ಬಹುತೇಕ ಖಚಿತ ಪಡಿಸಿಕೊಂಡಿರುವ ಅಧಿಕಾರಿಗಳು, ಆತನ ಜೊತೆ ಸಂಪರ್ಕ ಹೊಂದಿರುವವರ ಮೊಬೈಲ್ ನಂಬರುಗಳನ್ನ ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದೆ.