“ಬೆಳೆ ವಿಮೆ” 50-50 ವರ್ಕೌಟ್‌ಗೆ ನೀಚರ ಪ್ಲಾನ್: ಕಣ್ಣು ಮುಚ್ಚಿ ಕುಳಿತ ಸರಕಾರ….!!!

ಧಾರವಾಡ: ಬೆಳೆ ವಿಮೆ ಪರಿಹಾರ ಪಡೆಯಲು ಆನ್‌ಲೈನ್ ಅರ್ಜಿ ಹಾಕುವ ಸರ್ವರ್ ಬಂದ್ ಮಾಡಿ, ಒಳಗೊಳಗೆ 50-50 ಅನುಪಾತದಲ್ಲಿ ಹಣ ಹೊಡೆಯುವ ಸ್ಕೀಂ ಮಾಡಿಕೊಳ್ಳುವ ತವಕ ಹಲವು ಗ್ರಾಮಗಳಲ್ಲಿ ಕಂಡು ಬರತೊಡಗಿದೆ.
ಏನಿದು ಪ್ಲಾನ್ ಅನ್ನೋದನ್ನ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೇ, ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ. ರೈತರು ಅತಿಯಾದ ಮಳೆಯಿಂದ ಬೆಳೆಯನ್ನ ಕಳೆದುಕೊಂಡಿರುವುದು ಎಲ್ಲರಿಗೂ ಗೊತ್ತೆಯಿದೆ. ಆದರೆ, ಪರಿಹಾರ ಪಡೆಯಲು ಅನುಸರಿಸುತ್ತಿದ್ದ ರೀತಿ ಸದ್ದಿಲ್ಲದೇ ಗಬ್ಬೆದ್ದು ಹೋಗಿರುವುದನ್ನ ಯಾರೂ ಗಮನಿಸಿಯೇ ಇಲ್ಲ.
ಹೌದು… ಬೆಳೆ ವಿಮೆ ಪರಿಹಾರಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿದೆ ಎಂದು ಬಿಂಬಿಸಲಾಗಿದೆ. ಅಷ್ಟೇ ಅಲ್ಕ, ಸರ್ವರ್ ಕೂಡಾ ಕೆಲಸ ಮಾಡದ ಹಾಗೇ ವ್ಯವಸ್ಥಿತಿ ತಂತ್ರ ಹೆಣೆಯಲಾಗಿದೆ.
ಈ ಹೆಣೆದ ತಂತ್ರದಿಂದ ಕೆಲವರು ಅಡುಗೆ ಮನೆಯಲ್ಲಿ ಕುಳಿತು ಹಣ ಮಾಡತೊಡಗಿದ್ದಾರೆ. ಅದು ಹೇಗೆ ಎಂದು ನಿಮಗೆ ಪ್ರಶ್ನೆ ಮೂಡುತ್ತಿದೇಯಾ..!?
ಧಾರವಾಡ ಜಿಲ್ಲೆಯೂ ಸೇರಿದಂತೆ ಹಲವು ಭಾಗದಲ್ಲಿ ಕಮೀಷನ್ ಏಜೆಂಟರಂತೆ ಕೆಲವು ಆಸಾಮಿಗಳನ್ನ ಓರ್ವ ವ್ಯಕ್ತಿ ಗುಂಪು ಮಾಡಿಕೊಂಡಿದ್ದಾನೆ. ಆತ ನೇರವಾಗಿ ಆಯಾ ಗ್ರಾಮಗಳಿಗೆ ಹೋಗಿ, ನೂರಾರೂ ರೈತರ ಆಧಾರ ಕಾರ್ಡ್, ಉತಾರ ಮತ್ತು ಸಂಬಂಧಿಸಿದ ದಾಖಲೆಗಳನ್ನ ತೆಗೆದುಕೊಂಡು ಹೋಗುತ್ತಾನೆ.
ಹಾಗೇ ಹೋಗುವಾಗ, ‘ಬೆಳೆವಿಮೆಗೆ ಹಣವನ್ನ ನಾನೇ ತುಂಬುತ್ತೇನೆ. ಬಂದ ಪರಿಹಾರದಲ್ಲಿ 50-50 ಇರತ್ತೆ’ ಎಂದು ಊರಿನ ಕಮೀಷನ್ ಏಜೆಂಟರ್ ಮುಂದೆ ಅವರನ್ನ ಕೂಡಿಸಿ ಹೇಳುತ್ತಾನೆ. ಆತನ ಮಾತಿಗೆ ತಲೆದೂಗಿರೋ ರೈತನ ಅಕೌಂಟ್‌ಗೆ ಹಣ ಬಂದಿದ್ದೆ ತಡ, ಆಸಾಮಿ ಪ್ರತ್ಯಕ್ಷವಾಗಿ ತನ್ನ 50% ಹಣವನ್ನ ತೆಗೆದುಕೊಂಡು ಹೋಗುತ್ತಾನೆ.
ನಿಜವಾಗಿಯೂ ಫಲಾನುಭವಿ ಆಗಬೇಕಿರುವ ರೈತನಿಗೆ ಅನ್ಯಾಯವಾದರೂ ಪರ್ವಾಗಿಲ್ಲ ಎಂದುಕೊಂಡ ಕಮೀಷನ್ ಪಡೆಯುವ ಎರಡು ಕಡೆಯಿಂದಲೂ, ಬಿಸ್ಕೀತ್ ತಿಂದು ಅನ್ಯಾಯ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸರಕಾರ ಕ್ರಮ ಜರುಗಿಸುವ ಅವಶ್ಯಕತೆಯಿದೆ.