ಧಾರವಾಡದ “BGS” ಶಾಲೆಯಲ್ಲಿ ‘ಅಕ್ಷರದ ಜೊತೆಗೆ’ ನಿಜ ಜೀವನದ ಪಾಠ…!!!
ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಪಾಠ ಕಲಿಕೆ
ಪಾಲಕರ ಜೀವನದ ಕಷ್ಟ, ಮಕ್ಕಳಿಗೆ ತಿಳಿಸುವ ಯತ್ನ
ಧಾರವಾಡ: ವಿಕಾಸನಗರದಲ್ಲಿರುವ ಬಿಜಿಎಸ್ ಎಜ್ಯುಕೇಷನ್ ಸೆಂಟರ್ ಶಾಲೆಯಲ್ಲಿ ಸಂಸ್ಠೆಯ ಕಾರ್ಯದರ್ಶಿ ಡಾ.ಜೆ.ಎನ್ ರಾಮಕೃಷ್ಣೇಗೌಡರವರ ದಿವ್ಯ ಸಾನಿಧ್ಯದಲ್ಲಿ ಮಕ್ಕಳ ವ್ಯವಹಾರಕ್ಕೆ ಪೂರಕವಾಗುವಂತೆ ವಿನೂತನ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೀಡಿಯೋ…
ಮಕ್ಕಳ ಆರ್ಥಿಕ ಮುಗ್ಗಟ್ಟನ್ನು ಹೆದರಿಸುವ ಬಗೆ ಹಾಗೂ ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ಹಣ್ಣು-ತರಕಾರಿಗಳು, ಮನೆಯಲ್ಲೆ ತಯಾರಿಸಿದ ಆಹಾರ ಪದಾರ್ಥಗಳನ್ನ ತಂದು ಮಾರಾಟ ಮಾಡುವ ಮೂಲಕ ಮಕ್ಕಳ ಮಾನಸಿಕ ಸ್ಥಿತಿಗಳನ್ನು ಉಲ್ಲೇಖಗೊಳಿಸುವಂತಹ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪೋಷಕರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು. ಮಕ್ಕಳ ಸಂತೆಯನ್ನು ಬೆಳಗ್ಗೆಯಿಂದ ಮಧ್ಯಾಹ್ನದವರಿಗೆ ಅತ್ಯುತ್ತಮವಾಗಿ ಮಕ್ಕಳು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪೋಷಕರು , ಸಾರ್ವಜನಿಕರು ಶಾಲೆಯ ಕಲೆ ಶಿಕ್ಷಕರ ಎಲ್ಲರೂ ಉಪಸ್ಥಿತರಿದ್ದರು.