ಶಿಗ್ಗಾಂವ್ ಗೆಲುವು- “ವಾರ್ ರೂಂ” ರೂವಾರಿ “ಮೋಹನ ಅಸುಂಡಿ” ಕಾರ್ಯಕ್ಷಮತೆ…!!!

ಹುಬ್ಬಳ್ಳಿ: ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಯನ್ನ ಕಾಣದ ಶಿಗ್ಗಾಂವ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ ಅಸುಂಡಿಯವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಹೌದು… ಚುನಾವಣೆಯ ರೂಪುರೇಷೆ ರಚಿಸುವ ಜೊತೆಗೆ ಯಾವ ಯಾವ ನಾಯಕರು ಯಾವ ಭಾಗದಲ್ಲಿ ಪ್ರಚಾರ ಮಾಡಿದರೇ, ಅನುಕೂಲವಾಗತ್ತೆ ಎಂದು ನಿರ್ಧಾರ ಮಾಡಿ, ಅವರೆಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡುವುದು ವಾರ್ ರೂಂನ ಕರ್ತವ್ಯ. ಆ ಕರ್ತವ್ಯವನ್ನ ನಿಷ್ಠೆಯಿಂದ ನಿಭಾಯಿಸಿದ್ದು, ಮೋಹನ ಅಸುಂಡಿಯವರು.
ಹಾನಗಲ್, ಕುಂದಗೋಳ ಉಪಚುನಾವಣೆಯ ಸಮಯದಲ್ಲಿ ಇವರದ್ದೆ ಸಾರಥ್ಯವಿರುತ್ತಿತ್ತು. ಈಗ ಶಿಗ್ಗಾಂವ ಕ್ಷೇತ್ರದಲ್ಲಿ ಇವರ ಕಾರ್ಯ ರಾಜ್ಯದ ನಾಯಕರ ಮನಸ್ಸನ್ನ ಗೆದ್ದಿದೆ.
ಮೋಹನ ಅಸುಂಡಿಯವರ ಕಾರ್ಯವನ್ನ ಮೆಚ್ಚಿ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಸಚಿವ ಸತೀಶ ಜಾರಕಿಹೊಳಿಯವರು ಖುದ್ದು ಮಾತಾಡಿ, ಅಭಿನಂದನೆ ಸಲ್ಲಿಸಿರುವುದು, ಮೋಹನ ಅಸುಂಡಿಯವರ ಪಕ್ಷದ ನಿಷ್ಠೆಯನ್ನ ತೋರಿಸುತ್ತಿದೆ.