ಇಬ್ಬರು “ಮಾಜಿ ಸಿಎಂ ಪುತ್ರ”ರಿಗೆ ಮನೆ ದಾರಿ ತೋರಿಸಿದ “ಪಠಾಣ-ಯೋಗೇಶ್ವರ”…!!!

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನ ಸೋಲಿಸಿದ ಹಳೇಯ ರಾಜಕೀಯ ಫಂಟರ್‌ಗಳು
ಬೆಂಗಳೂರು: ರಾಜ್ಯದ ಉಪಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯಾತೀತ ಜನತಾದಳದ ಮಾಜಿ ಮುಖ್ಯಮಂತ್ರಿ ಅವರ ಪುತ್ರರನ್ನ ಸೋಲಿಸುವಲ್ಲಿ ಮತದಾರ ಮುಂದಾಗಿದ್ದು, ಫಲಿತಾಂಶದಲ್ಲಿ ಗೋಚರವಾಗಿದೆ.
ಚೆನ್ನಪಟ್ಟಣದಲ್ಲಿ ಮೂರನೇಯ ಬಾರಿ ಅದೃಷ್ಟದ ಪರೀಕ್ಷೆಗೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ 20 ಸಾವಿರ ಮತಗಳ ಹಿನ್ನಡೆಯಿಂದ ಸೋಲುವುದು ಖಚಿತವಾಗಿದೆ.
ಶಿಗ್ಗಾಂವ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿದ್ದಾರೆ.