Posts Slider

Karnataka Voice

Latest Kannada News

ನೀವು ಹುಬ್ಬಳ್ಳಿ-ಧಾರವಾಡದಲ್ಲಿದ್ದು ‘ಈ ಊರು’ಗಳನ್ನ ಇಷ್ಟ ಪಡ್ತಿದ್ದರೇ ನೀವೂ ಈ ಸ್ಟೋರಿ ನೋಡಲೇಬೇಕು…!!!

1 min read
Spread the love

ಹುಬ್ಬಳ್ಳಿ/ಧಾರವಾಡ: ಅವಳಿನಗರವೆಂಬ ಈ ಎರಡು ನಗರಗಳಲ್ಲಿ ನೀವೂ ಪ್ರತಿದಿನವೂ ಮಿಂದೆದ್ದು ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಿದ್ದೀರಿ ಅಲ್ವಾ. ಆದರೆ, ಈ ಎರಡು ನಗರಗಳ ಸ್ಥಿತಿ ಅದೇಲ್ಲಿಗೆ ಬಂದು ನಿಂತಿದೆ ಎಂಬುದನ್ನ ಇನ್ಯಾರು ನೋಡಬೇಕು, ಹೇಳಿ.

ವಾಣಿಜ್ಯನಗರಿಯೂ, ಛೋಟಾ ಮುಂಬೈ ಮತ್ತು ಕಾಮರ್ಸ್ ನಗರ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ ಹುಡ್ದಿಯಾಗಿ ವರ್ಷಗಳೇ ಕಳೆಯುತ್ತ ಬಂದಿದೆ. ಯಾವ ರಸ್ತೆಗೆ ಹೋದರೂ, ಅದೇ ಹಣೆಬರಹ. ಎಲ್ಲಿಯೂ “ಮುಕ್ತಾಯ” ಕಾಣದ ಕಾಮಗಾರಿಗಳು.

ಹೊರಡುವ ವಾಹನದ ಹೊಗೆ, ನಿಲ್ಲಲ್ಲು ಜಾಗವಿಲ್ಲದ ಪುಟ್‌ಪಾಥ್‌ಗಳು. ಇಲ್ಲಬಾರದ ವಿಷಯಗಳನ್ನ ಮುನ್ನೆಲೆಗೆ ತಂದು ಅಭಿವೃದ್ಧಿ ಮಾಡದ ರಾಜಕಾರಣಿಗಳು. ಆದರೂ, ಏನೂ ಆಗೇ ಇಲ್ಲ ಎಂಬಂತೆ ಜನರು ಇರುವುದು ಏಕೆ.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತವೂ ಸೇರಿದಂತೆ ಎಲ್ಲಿಯೂ ನಿಮಗೆ ಉತ್ತಮವಾದ ರಸ್ತೆಗಳು ಕಾಣಸಿಗಲ್ಲ. ಆದರೂ, ನಗರ ವಾಸಿಗಳಾದ ತಾವೂ ಏನು ಮಾತಾಡೋದೆ ಇಲ್ಲ. ಕಟ್ಟುವ ಟ್ಯಾಕ್ಸ್ ಎಲ್ಲಿ ಎಂದು ಕೇಳುವ ಧೈರ್ಯವೂ ಜನರಿಂದ ದೂರ ಸರೀತಾ ಎಂಬ ಪ್ರಶ್ನೆ ಮೂಡತ್ತೆ.

ಧಾರವಾಡದ ಓಲ್ಡ್ ಡಿಎಸ್ಪಿ ರಸ್ತೆ ಅದ್ಯಾವಾಗ ಮುಗಿಯುತ್ತೋ ಭಗವಂತನೇ ಬಲ್ಲ. ಹೇಳುವವರು ಮತ್ತೂ ಕೇಳುವವರು ಯಾರೂ ಇಲ್ಲ. ದಿನಬೆಳಗಾದರೇ, ದೇಶ- ವಿದೇಶದ ಸುದ್ದಿಗಳನ್ನ, ಸಮಸ್ಯೆಗಳನ್ನ ಜನರ ತಲೆಯೊಳಗೆ ತುಂಬಿ ತಿರುಗಾಡುವ ರಾಜಕಾರಣಿಗಳು, ತಮ್ಮೂರು ಕೊಳಕ್ಕೆದ್ದು ಹೋದರೂ ಮಾತನಾಡಲ್ಲ. ಹಾಗಂತ, ನಿಮ್ಮೂರಿನ ಬಗ್ಗೆ ನಿಮಗೆ ಕಾಳಜಿ ಏಕೆ ಇಲ್ಲ.

ದೊಡ್ಡ ದೊಡ್ಡ ಮಾತನಾಡುವ ನೀವು ಸತ್ತ ಮೇಲೆ ಉಪಯೋಗವಾಗುವ ಕನಸು ಕಾಣುವ ಬದಲು, ಇದ್ದಾಗ ನಿಮ್ಮೂರನ್ನ ಚೆಂದಾಗಿ ನೋಡಿಕೊಳ್ಳುವ ಜವಾಬ್ಧಾರಿ ಯಾರದ್ದು, ಆತ್ಮಸಾಕ್ಷಿಯ ಜೊತೆಗೆ ಬದುಕುತ್ತಿರುವವರು ಒಂದ್ಸಲ ಯೋಚಿಸಿ, ನೀವು ಮಣ್ಣಾಗುವ ಶಹರಗಳ ನಿಮಗೆ ಕಾಳಜಿ ಯಾಕೆ ಮರೆಯುತ್ತಿದೆ.

ಅಭಿಪ್ರಾಯಗಳನ್ನ ಕರ್ನಾಟಕವಾಯ್ಸ್.ಕಾಂ ವಾಟ್ಸಾಫ್‌ಗೆ ತಿಳಿಸಿ

 


Spread the love

Leave a Reply

Your email address will not be published. Required fields are marked *

You may have missed