Karnataka Voice

Latest Kannada News

ಧಾರವಾಡ ಮರಾಠ ಸಮಾಜದಿಂದ “ಧೀಮಂತ ಪ್ರಶಸ್ತಿ” ಪುರಸ್ಕೃತ “ಡಾ.ಶಿವಾಜಿ ಜಾಧವ”ರಿಗೆ ಸತ್ಕಾರ…!!!

Spread the love

ಧಾರವಾಡ ಮರಾಠಾ ಬಾಂಧವರಿಂದ ಧೀಮಂತ ಪ್ರಶಸ್ತಿ ಪುರಸ್ಕೃತ ಶಿವಾಜಿ ಜಾದವರಿಗೆ ಸನ್ಮಾನ

ಧಾರವಾಡ: ನಗರದ ಯುವ ವಿಜ್ಞಾನಿ ಸಂಶೋಧಕ ಡಾ.ಶಿವಾಜಿ ಕಾಶೀನಾಥ್ ಜಾಧವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೀಡುವ ಕರ್ನಾಟಕ ರಾಜ್ಯೋತ್ಸವ ಧೀಮಂತ ಪ್ರಶಸ್ತಿ ಲಭಿಸಿದ್ದಕ್ಕೆ ಧಾರವಾಡದ ಮರಾಠ ಸಮಾಜದವರು ಶಿವಾಜಿ ಜಾಧವರ ನಿವಾಸದಲ್ಲಿ ಸತ್ಕರಿಸಿದರು.

ಸತ್ಕರಿಸಿದ ವೀಡಿಯೋ ಇಲ್ಲಿದೆ ನೋಡಿ…

ಸಮಾಜದ ಮುಖಂಡ ಬಸವರಾಜ ಜಾಧವ ಮಾತನಾಡಿ, ಡಾ.ಶಿವಾಜಿ ಜಾಧವ ಅವರು, ತಮ್ಮ ಸಣ್ಣ ವಯಸ್ಸಿನಲ್ಲಿ ಅಪಾರ ಅನುಭವ ಹೊಂದುವ ಜೊತೆಗೆ ಯುವ ವಿಜ್ಞಾನಿಯಾಗಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಕ್ಟರೇಟ್ ಪದವಿ ಪಡೆದ ರಾಜ್ಯದ ಏಕೈಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದರು.

ಎಚ್ಐವಿ ಕುರಿತು ಉನ್ನತ ಸಂಶೋಧನೆ ಮಾಡಿ ಪುರಸ್ಕಾರ ಪಡೆದಂತಹ ಇವರಿಗೆ ಇಂದು ಅಭಿನಂದಿಸಲು ಸಂತೋಷವೆನಿಸುತ್ತದೆ ಎಂದೇಳಿದರು.

ಧಾರವಾಡದಲ್ಲಿ ಸುಮಾರು ಯುವಕರು ವಿವಿಧ ವಿಭಾಗಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವ ಜೊತೆಗೆ ಬೆಳೆದಿದ್ದಾರೆ‌. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಇಂತಹ ಧೀಮಂತ ಯುವಕರನ್ನ ಗುರುತಿಸಿ ಪ್ರೋತ್ಸಾಹಿಸಿ ಮುಂದಿನ ಭವಿಷ್ಯ ರೂಪಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮರಾಠ ಸಮಾಜದ ಮುಖಂಡರಾದ ನಾರಾಯಣ ಹುಬ್ಬಳ್ಳಿ,  ಬಸವರಾಜ ಜಾಧವ, ವಿಠ್ಠಲ ಚವ್ಹಾಣ,  ದತ್ತಾ ಮೂಟೆ, ವಿನಾಯಕ ಗಾಯಕವಾಡ, ಮಂಜುನಾಥ ಜಾಧವ, ಸುಭಾಷ್ ಗಾಯಕವಾಡ, ರಮೇಶ್ ಚೂಡಾಮಣಿ, ಸುರೇಶ್ ಸವ್ವಾಸಿ, ದಿನೇಶ್ ದುಮ್ಮಾಳ, ದರ್ಮಾಜಿ ಜಾಧವ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *