ಲಕ್ಷ್ಮಣ ನಿಂಬರಗಿ, ಜೆ.ಸಂಗೀತಾ, ಚೆನ್ನಬಸವೇಶ್ವರ ಲಂಗೋಟಿ ಸೇರಿ 7IPS ವರ್ಗಾವಣೆ….

ಬೆಂಗಳೂರು : ರಾಜ್ಯದ 7 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಾಂತನು ಸಿನ್ಹಾ ಅವರನ್ನು CID DIGಯಾಗಿ ವರ್ಗಾವಣೆ ಮಾಡಿದ್ದು, ಜಿ.ಸಂಗೀತ ಅವರನ್ನು CID SPಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
BMTC ವಿಜಲೆನ್ಸ್ ಡೈರೆಕ್ಟರ್ ಆಗಿ ಅಬ್ದುಲ್ ಅಹಾದ್, ವಿಜಯಪುರ SPಯಾಗಿ ಲಕ್ಷ್ಮಣ್ ನಿಂಬರಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಶಿವಾಂಶು ರಜಪೂತ್ ಅವರನ್ನು SCRB ಎಸ್ಪಿಯಾಗಿ ವರ್ಗಾವಣೆ ಮಾಡಿದ್ದು, ಪೃಥ್ವಿಕ್ ಶಂಕರ್ ಅವರನ್ನು ಯಾದಗಿರಿ ಎಸ್ಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.