ಅಣ್ಣಿಗೇರಿ ಬಳಿ ಅಪಘಾತ “ತಾಯಿ-ಮಡದಿ” ಜೊತೆ ಹೊರಟಿದ್ದ ಮಗ ಮಸಣಕ್ಕೆ…!!!

ಅಣ್ಣಿಗೇರಿ: ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುವಾಗ ಟ್ರಕ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವಿಗೀಡಾದ ಘಟನೆ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದಲ್ಲಿ ಸಂಭವಿಸಿದೆ.
ತಾಯಿ ಮತ್ತು ಹೆಂಡತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಗೂಳಪ್ಪ ಉಮ್ಮಣ್ಣವರ(40) ಸ್ಥಳದಲ್ಲಿ ಸಾವಿಗೀಡಾಗಿದ್ದು, ಪತ್ನಿ ಭೀಮವ್ವ, ತಾಯಿ ಪಾರವ್ವ ಇಬ್ಬರಿಗೂ ಗಾಯಗಳಾಗಿವೆ.
ಹೈವೆ ಸಂಪರ್ಕ ಕಲ್ಪಿಸುವ ರಸ್ತೆಗೆ ಎದುರು ಬಂದಿದ್ದ ಟ್ರಕ್‌ನಿಂದ ದುರ್ಘಟನೆ ಸಂಭವಿಸಿದೆ. ಮಹಿಳೆಯರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ಮೃತ ವ್ಯಕ್ತಿ ಗದಗ ಜಿಲ್ಲೆಯ ಅಡವಿ ಸೋಮಾಪುರದವರೆಂದು ಗೊತ್ತಾಗಿದೆ.
ಹುಬ್ಬಳ್ಳಿ ತಾಲೂಕಿನ ರೊಟ್ಟಿಗವಾಡ ಗ್ರಾಮಕ್ಕೆ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮೂವರು ಮರಳಿ ಬರುವಾಗ ಘಟನೆ ನಡೆದಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.