ಕುಂದಗೋಳ: ಬೆಳ್ಳಿ-ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್ ‘ಶರೀಫಸಾಬ’- ಖುಷಿಯಿಂದ ಕಣ್ಣೀರಾಕಿದ ಮಹಿಳೆ…!!!

ಹಣ, ಬೆಳ್ಳಿ ಇದ್ದ ಬ್ಯಾಗ್ ಪ್ರಯಾಣಿಕರಿಗೆ ನೀಡಿದ ಕಂಡಕ್ಟರ್, ಡ್ರೈವರ್
ಕುಂದಗೋಳ: ಪ್ರಯಾಣಿಕರೊಬ್ಬರು ಸಾರಿಗೆ ಬಸ್‌ನೊಳಗೆ ಮರೆತು ಹೋದ ನಗದು ಹಣ, ಬೆಳ್ಳಿ ಆಭರಣ ಮತ್ತು ಬಟ್ಟೆಯಿದ್ದ ಬ್ಯಾಗನ್ನು ಪುನಃ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಸಾರಿಗೆ ಸಂಸ್ಥೆಯ ನಿರ್ವಾಹಕ ಮತ್ತು ಚಾಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಂಪೂರ್ಣ ವೀಡಿಯೋ….
ನವಲಗುಂದ ತಾಲೂಕಿನ ಹನಸಿ ಗ್ರಾಮದ ಕಮಲಾ ಎಂಬ ಮಹಿಳೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮಕ್ಕೆ ತೆರಳಲು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಹೊರಡುವ ಯರಗುಪ್ಪಿ ಬಸ್’ನಲ್ಲಿ ಪ್ರಯಾಣ ಬೆಳೆಸಿದ್ದರು.
ಪ್ರಯಾಣ ಮದ್ಯೆ ಕುಂದಗೋಳದಲ್ಲಿ ಬಸ್’ನಿಂದ ಇಳಿದಾಗ ಬ್ಯಾಗ್ ಮರೆತಿದ್ದರು, ಈ ವೇಳೆ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗನ್ನು ತೆಗೆದು ಪುನಃ 6 ಗಂಟೆಗೆ ಅದೇ ಕುಂದಗೋಳ ಬಸ್ ನಿಲ್ದಾಣದಲ್ಲಿ ಮಹಿಳೆಗೆ ನಿರ್ವಾಹಕ ಶರೀಪಸಾಬ ನದಾಫ್, ಚಾಲಕ ಬಸವಂತಪ್ಪ ಮಂಟೂರು ನೀಡಿ ಜನರ ಪ್ರಸಂಶೆಗೆ ಪಾತ್ರರಾದರು.
ಬ್ಯಾಗ್‌ನಲ್ಲಿ ಬೆಳ್ಳಿ ಆಭರಣ, ನಗದು ಹಣ ಕಳೆದುಕೊಂಡ ಪೇಚಿಗೆ ಸಿಲುಕಿ ಕಣ್ಣೀರು ಹಾಕಿದ್ದ ಮಹಿಳೆ ಖುಷಿಪಟ್ಟರು.