“ಹುಬ್ಳಿ-ಧಾರ್ವಾಡ ಬೈಪಾಸ್” ಅಪರಿಚಿತ ವಾಹನಗಳಿಂದ 8ಕ್ಕೂ ಹೆಚ್ಚು ಜನರ ದುರ್ಮರಣ…!!!
ಹುಬ್ಬಳ್ಳಿ: ನಗರದ ಗಬ್ಬೂರ ಬಳಿಯಿಂದ ಆರಂಭಗೊಂಡು ನರೇಂದ್ರ ಕ್ರಾಸ್ ಬಳಿ ಸೇರುವ ಬೈಪಾಸ್‌ನಲ್ಲಿ ಕೆಲವೇ ಕೆಲವು ದಿನಗಳಲ್ಲಿ ಎಂಟಕ್ಕೂ ಹೆಚ್ಚು ಜನರು ಅಪರಿಚಿತ ವಾಹನಗಳ ಡಿಕ್ಕಿಯಿಂದ ಜೀವವನ್ನ ಕಳೆದುಕೊಂಡಿರುವ ಅಘಾತಕಾರಿ ವಿಷಯವನ್ನ ಸಂಬಂಧಿಸಿದವರು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
ಇಂದು ಹಾಡುಹಗಲೇ ನವಲೂರ ಗ್ರಾಮದ ಸಚಿನ ಭೋಸ್ಲೆ ಎಂಬ ಯುವಕನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿ ಸಾವಿಗೀಡಾಗಿದ್ದ. ಕಳೆದ ಮೂರು ದಿನಗಳ ಹಿಂದೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಇಬ್ವರು ರುಂಡ ಪತ್ತೆಯಾಗದ ರೀತಿಯಲ್ಲಿ ಸಾವಿಗೀಡಾಗಿದ್ದರು.
ಈ ಘಟನೆಗಳು ನಡೆಯುವ ಪೂರ್ವದಲ್ಲಿ ಧಾರವಾಡದ ಬಳಿಯೂ ಇದೇ ಥರದ ಘಟನೆಗಳು ನಡೆದಿವೆ. ಆದರೆ, ಇಲ್ಲಿಯವರೆಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನಗಳು ಮಾತ್ರ ಸಿಗುತ್ತಿಲ್ಲ.
ಬೈಪಾಸ್ ಮೂಲಕ ಹೋಗುವುದು ಎಂದರೇ, ಯಮನ ಜೊತೆ ಕಾದಾಟ ಮಾಡಿ ಬಂದಂತೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರೇ ಕಠಿಣ ಕ್ರಮ ಜರುಗಿಸದೇ ಹೋದಲ್ಲಿ ಇಂತಹ ಘಟನೆಗಳಿಗೆ ಕೊನೆಯಾಗುವುದಿಲ್ಲ.