ಅಣ್ಣಿಗೇರಿಯಲ್ಲಿ ಭೀಕರ ಅಪಘಾತ- ತುಂಡು ತುಂಡಾದ ಬೈಕ್: ಸವಾರ ಆನಂದ ಮರಿಗೌಡರ ದುರ್ಮರಣ…!!!

ಧಾರವಾಡ: ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಮೃತ ಬೈಕ್ ಸವಾರನನ್ನ ಆನಂದ್ ಮರಿಗೌಡರ (19) ಎಂದು ಗುರುತಿಸಲಾಗಿದೆ. ಗದಗನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರ್, ಹೈವೆ ಕ್ರಾಸ್ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯಲ್ಲಿ ಬೈಕ್ ಎರಡು ತುಂಡಾಗಿದ್ದು, ಕಾರಿನ ಮುಂಭಾಗವೂ ಜಖಂಗೊಂಡಿದೆ.
ಮೃತ ಯುವಕ ಆನಂದ ಅಣ್ಣಿಗೇರಿ ಪಟ್ಟಣದ ಬಂಗಾರಪ್ಪನಗರ ನಿವಾಸಿಯಾಗಿದ್ದು, ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.