ಅಕ್ಟೋಬರ್ 3ರಿಂದ 20ರ ವರೆಗೆ ಶಾಲೆಗಳಿಗೆ ದಸರಾ ರಜೆ ಘೋಷಣೆ ಮಾಡಿದ ರಾಜ್ಯ ಸರಕಾರ…

ಬೆಂಗಳೂರು: ರಾಜ್ಯ ಸರಕಾರವೂ ಶಾಲೆಗಳಿಗೆ ದಸರಾ ರಜೆಯನ್ನ 17 ದಿನಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದು, ಇಡೀ ರಾಜ್ಯದ ಪ್ರತಿ ಶಾಲೆಗೂ ಅನ್ವಯವಾಗಲಿದೆ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಇದಾದ ನಂತರ ಅಕ್ಟೋಬರ್ 2ರ ವರೆಗೆ ಶಾಲೆಗಳು ಎಂದಿನಂತೆ ನಡೆಯಲಿವೆ.
ಪ್ರತಿ ಬಾರಿಯೂ ರಜೆಯ ಗೊಂದಲ ಸೃಷ್ಡಿಯಾಗುತ್ತಿತ್ತು. ಹಾಗಾಗಿಯೇ ರಾಜ್ಯ ಸರಕಾರ ಮೊದಲೇ ಈ ಆದೇಶವನ್ನ ಹೊರಡಿಸಿದೆ.