ಕರ್ತವ್ಯಲೋಪ ಇನ್ಸಪೆಕ್ಟರ್ ಅಮಾನತ್ತು ಮಾಡಿ ಆದೇಶ…!!!

ಘಟನೆಗೆ ಸಂಬಂಧಿಸಿದಂತೆ ಕ್ರಮ
ಗಲಭೆಯ ಹಿನ್ನೆಲೆಯಲ್ಲಿ ಅಮಾನತ್ತು
ಮಂಡ್ಯ: ನಾಗಮಂಗಲದಲ್ಲಿ ಕೋಮು ಘರ್ಷಣೆ ಪ್ರಕರಣದ ಸಂಬಂಧಿಸಿದಂತೆ ನಾಗಮಂಗಲ ಪಟ್ಟಣ ಠಾಣೆ ಇನ್ಸ್ ಪೆಕ್ಟರ್ ಅವರನ್ನ ಕರ್ತವ್ಯ ಲೋಪ, ನಿರ್ಲಕ್ಷ್ಯ ಆರೋಪದ ಹಿನ್ನೆಲೆ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಅಶೋಕಕುಮಾರ್ ಅಮಾನತ್ತಾದ ಪಟ್ಟಣ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಮಂಡ್ಯ ಕಾರಾಗೃಹಕ್ಕೆ ಆರೋಪಿಗಳು ಶಿಫ್ಟ್ ಮಾಡಲಾಗಿದೆ.
ನಾಗಮಂಗಲ ಪಟ್ಟಣಕ್ಕೆ ಇಂದು ಮಂಡ್ಯ ಸಂಸದರು ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ಗಲಭೆ ಸಂಭವಿಸಿರುವ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ವೇಳೆ ಕೇಂದ್ರ ಸಚಿವರಿಗೆ ಜಿಲ್ಲೆಯ ಜೆಡಿಎಸ್ ನಾಯಕರು ಹಾಗೂ ಪಕ್ಷದ ಮುಖಂಡರುಗಳು ಸಾಥ್ ನೀಡಲಿದ್ದಾರೆ.