‘ಹುಬ್ಬಳ್ಳಿ-ಧಾರವಾಡ’ ಮಂತ್ರಿಯಾಗುವ ಕನಸು “ಆರ್ ಜೋಡ್” ಡ್ರೆಸ್ ಹೊಲಿಸಲು ಮುಂದಾದ ಹಾಲಿ ಶಾಸಕ…!!!

ಧಾರವಾಡ: ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯನವರ ಪ್ರಕರಣದ ಸಂಬಂಧಿಸಿದಂತೆ ರಾಜಕೀಯ ಡೋಲಾಯಮಾನ ಸ್ಥಿತಿ ಮುಂದುವರೆದ ಸಮಯದಲ್ಲಿಯೇ ಹುಬ್ಬಳ್ಳಿ-ಧಾರವಾಡದ ಶಾಸಕರೊಬ್ಬರು ಮಂತ್ರಿಯಾಗುವ ಉಮೇದಿಯಲ್ಲಿ ಹೊಸ ಬಟ್ಟೆ ಹೊಲಿಸಲು ರಾಜಧಾನಿಯಲ್ಲಿನ ಟೇಲರ್‌ಗೆ ಹೇಳಿರುವ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ.
ಧಾರವಾಡ ಜಿಲ್ಲೆಗೆ ಕಲಘಟಗಿ ಕ್ಷೇತ್ರದ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಉಸ್ತುವಾರಿ ಸಚಿವರು ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.
ಸೋಜಿಗ ಪಡುವ ರೀತಿಯಲ್ಲಿ ಹಾಲಿ ಕಾಂಗ್ರೆಸ್ ಶಾಸಕರು ಮಂತ್ರಿಯಾಗುವ ಜೊತೆಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ನಾನೇ ಆಗುತ್ತೇನೆ ಎಂದು ತಮ್ಮ ಅತ್ಯಾಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆನ್ನುವುದು ಸುದ್ದಿಯಿದೆ.
ಬೆಂಗಳೂರಿನ ಪ್ರತಿಷ್ಠಿತ (ಹುಬ್ಬಳ್ಳಿ ಧಾರವಾಡದವರಿಗೆ) ಟೇಲರ್ ಬಳಿ ಆರು ಜೋಡಿ ಮಂತ್ರಿ ಡ್ರೆಸ್ ರೆಡಿ ಮಾಡಿಸುತ್ತಿರುವುದು ಭರದಿಂದ ಸಾಗಿದೆ. ಇದಕ್ಕೆ ಹಣ ಕೊಟ್ಟವರು ಅವಳಿನಗರದ ಪ್ರಮುಖ ಸ್ಥಳದಲ್ಲಿ ನಿಂತು, “ತಡೀ ತಡೀ, ನಮ್ಮ್ ಸಾಹೇಬಾ ಮಂತ್ರಿ ಅಕ್ಕಾನ್. ನಾವೂ ಮಾಡ್ಕೋತೇವಿ” ಎಂದು ಹೇಳಿದ್ದನ್ನ ಸರ್ಕಲ್‌ನಲ್ಲಿ ನಿಲ್ಲಿಸಿರೋ ಪ್ರತಿಮೆ ಕೇಳಿಸಿಕೊಂಡಿದೆ ಎಂಬುದನ್ನ ನೀವು ನಂಬುವ ಪ್ರಯತ್ನ ಮಾಡಬೇಕು.